ದಾವಣಗೆರೆ: ರಾಜ್ಯ ಸರ್ಕಾರ ಮರು ಜಾತಿ ಗಣತಿ ಮಾಡುತ್ತಿದೆ, ಆದರೆ ಜಾತಿ ಗಣತಿಯಲ್ಲಿ ಗೊಂದಲವಿದೆ, ಹೀಗಾಗಿ ಗೊಂದಲ ನಿವಾರಣೆ ಆಗಬೇಕಾದ್ರೆ ಜಾತಿಗಣತಿಯನ್ನು ಮುಂದಕ್ಕೆ ಹಾಕಿ ಎಂದು ರಾಜ್ಯ ಸರ್ಕಾರಕ್ಕೆ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಶ್ರೀಗಳು ಸರ್ಕಾರದಲ್ಲಿ ಆದ ಗೊಂದಲಗಳನ್ನು ಮೊದಲು ಸರಿಪಡಿಸಿಕೊಳ್ಳಲಿ, ಸರ್ಕಾರದಲ್ಲೇ ಗೊಂದಲ ಇದ್ದಾಗ ನಾವು ಹೇಗೆ ಸರಿಪಡಿಸಿಕೊಳ್ಳೊದು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಇತರೆ ಕಾಲಂನಲ್ಲಿ ಲಿಂಗಾಯತ ಅಂತ ಬರೆಸಲು ಕರೆ ನೀಡಿದ ಶ್ರೀಗಳು, ಜೈನ ಧರ್ಮ, ಭೌದ್ದ ಧರ್ಮ ,ಕ್ರೈಸ್ತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಕ್ಕಿದೆ. ಆ ಮಾನ್ಯತೆ ಲಿಂಗಾಯತರಿಗೆ ಸಿಕ್ಕಿಲ್ಲ. ಜಾತಿಯ ಕಾಲಂನಲ್ಲಿ ಒಳ ಪಂಗಡ ಬರೆಸಲು ಕರೆ ನೀಡಲಾಗಿದೆ. ಇದರಿಂದ ಅಧಿಕೃತ ಲಿಂಗಾಯತ ಸಂಖ್ಯೆ ಸಿಗುತ್ತೆ.
ಹಿಂದಿನ ಜಾತಿ ಗಣತಿಯಲ್ಲಿ 60 ಲಕ್ಷಕ್ಕೆ ಇಳಿದಿದೆ. ಒಂದು ಕೋಟಿಗೂ ಅಧಿಕ ಲಿಂಗಾಯತರು ಇದ್ದೇವೆ. ಲಿಂಗಾಯತ ಎನ್ನುವುದು ಜಾತ್ಯತೀತ ಧರ್ಮ. ಮೀಸಲಾತಿಗಾಗಿ ಒಳ ಜಾತಿಗಳನ್ನು ಬರೆಸಿ, ಆಗ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುತ್ತದೆ. ಯಾವ ಧರ್ಮವನ್ನು ಹೊಡೆಯುವ ಉದ್ದೇಶ ಲಿಂಗಾಯತ ಧರ್ಮದಲ್ಲ. ಯಾವ ಧರ್ಮವನ್ನು ಹೊಡೆಯುವ ಉದ್ದೇಶ ಇಲ್ಲ. ನಮ್ಮ ಧರ್ಮದ ಗೌರವ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಬಡವರು ಎಲ್ಲಾ ವರ್ಗದಲ್ಲಿ ಇದ್ದಾರೆ. ಲಿಂಗಾಯತ ಧರ್ಮದಲ್ಲಿ ಬಡವರಿದ್ದಾರೆ ಅವರಿಗೂ ಮೀಸಲಾತಿ ಸಿಗಬೇಕು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಿರ್ಣಯ ಮಾಡಲಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.