ಬೆಂಗಳೂರು: ಪೋಸ್ಟ್ ಆಫೀಸ್ ಈಗ ಬ್ಯಾಂಕ್ ಆಗಿ, ಉಳಿತಾಯ ಯೋಜನೆಗಳ ತಾಣವಾಗಿ ಬದಲಾಗಿದೆ. ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಆರಂಭಿಸುವ ಉಳಿತಾಯವು ಕೆಲವೇ ವರ್ಷಗಳಲ್ಲಿ ಹೆಚ್ಚಿನ ಆದಾಯ ನೀಡುತ್ತವೆ. ಅದರಲ್ಲೂ, ರಿಕರಿಂಗ್ ಡೆಪಾಸಿಟ್ ಅಥವಾ ಆರ್ ಡಿಯಲ್ಲಿ ಹೂಡಿಕೆ ಮಾಡಿದರೆ, ವಾರ್ಷಿಕ ಶೇ.6.8ರವರೆಗೆ ಬಡ್ಡಿಯ ಲಾಭ ದೊರೆಯಲಿದೆ. ಅದರಲ್ಲೂ, ತಿಂಗಳಿಗೆ 10 ಸಾವಿರ ರೂಪಾಯಿ ಠೇವಣಿ ಮಾಡಿ, 17 ಲಕ್ಷ ರೂ. ಗಳಿಸುವ ಯೋಜನೆಯೂ ಇದೆ.
ಈಗ ಪೋಸ್ಟ್ ಆಫೀಸ್ ಆರ್ಡಿ ಮೇಲೆ ಶೇ. 6.8 ರಷ್ಟು ಬಡ್ಡಿ ದರ ಸಿಗುತ್ತಿದೆ. ಇದರ ಮೆಚ್ಯೂರಿಟಿ ಅವಧಿ ಐದು ವರ್ಷ. ಅಂದ್ರೆ, ಐದು ವರ್ಷ ನೀವು ಕಂತುಗಳನ್ನು ಕಟ್ಟಬಹುದು. ಇದಾದ ಬಳಿಕ ಚಾಣಾಕ್ಷತನ ಮೆರೆದರೆ, ಪುನಾ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುವುದರಲ್ಲಿ ಎರಡು ಮಾತಿಲ್ಲ.
ನೀವು ತಿಂಗಳಿಗೆ 10,000 ರೂಪಾಯಿಯಂತೆ ಐದು ವರ್ಷಗಳ ಕಾಲ ಪೋಸ್ಟ್ ಆಫೀಸ್ ಆರ್ ಡಿಯಲ್ಲಿ ಹೂಡಿಕೆ ಮಾಡ್ತೀರಾ ಅಂದುಕೊಳ್ಳಿ. ಐದು ವರ್ಷ ಆದ್ಮೇಲೆ, ಆ ದುಡ್ಡನ್ನು ನೀವು ತಕ್ಷಣ ತಗೊಳೋಕೆ ಹೋಗ್ಬೇಡಿ, ಇನ್ನೂ ಐದು ವರ್ಷ ಅಲ್ಲೇ ಬಿಟ್ಟುಬಿಡಿ. ಹತ್ತು ವರ್ಷ ಮುಗಿಯೋ ಹೊತ್ತಿಗೆ, ನಿಮ್ಮ ಅಸಲು ಮತ್ತು ಬಡ್ಡಿ ಸೇರಿ, ಬರೋಬ್ಬರಿ 17 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತೆ. ಆ ಮೂಲಕ ಸಣ್ಣ ಉಳಿತಾಯವೂ ಹೆಚ್ಚಿನ ಲಾಭ ತಂದುಕೊಡುತ್ತದೆ.
ಬ್ಯಾಂಕ್ ಗಳಲ್ಲಿ ಮತ್ತು ಪೋಸ್ಟ್ ಆಫೀಸ್ ನಲ್ಲಿ ಆರ್ ಡಿ ವೈಶಿಷ್ಟ್ಯಗಳು ಸಾಮಾನ್ಯವಾಗಿ ಒಂದೇ ರೀತಿಯಲ್ಲಿರುತ್ತವೆ. ಆದರೆ, ಕೆಲವು ಲಾಭಗಳು, ವಿಶೇಷವಾಗಿ ಬಡ್ಡಿ ದರಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಲ್ಲಿ ಪೋಸ್ಟ್ ಆಫೀಸ್ ಸ್ವಲ್ಪ ಮೇಲುಗೈ ಸಾಧಿಸುತ್ತದೆ. ಏಕೆಂದರೆ, ತಾವು ಠೇವಣಿದಾರರನ್ನು ಸಣ್ಣ ಉಳಿತಾಯದ ಅಭ್ಯಾಸಕ್ಕೆ ಪ್ರೇರೇಪಿಸಲು ಉತ್ತಮ ಬಡ್ಡಿ ನೀಡುತ್ತಾರೆ. ಬ್ಯಾಂಕ್ ಗಳ ಆರ್ ಡಿ ಬಡ್ಡಿ ದರಗಳು ಯಾವಾಗಲೂ ಬದಲಾಗುತ್ತಿರುತ್ತವೆ. ಹಾಗಾಗಿ, ಪೋಸ್ಟ್ ಆಫೀಸ್ ನಲ್ಲಿ ಆರ್ ಡಿ ಮಾಡುವುದು ಸೂಕ್ತ.