ಬೆಂಗಳೂರು: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆ ಎಂದರೆ ಹೆಚ್ಚಿನ ಜನರಿಗೆ ಇಷ್ಟವಾಗುವುದಿಲ್ಲ. ಇದರಲ್ಲಿ ರಿಸ್ಕ್ ಕೂಡ ಇರುವುದರಿಂದ ಸುರಕ್ಷಿತ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಗಳು ಪ್ರಮುಖವಾಗಿವೆ. ಇತ್ತೀಚೆಗಷ್ಟೇ ಜುಲೈ-ಸೆಪ್ಟೆಂಬರ್ ಅವಧಿಗೆ ಅಂಚೆ ಕಚೇರಿಯ ಹೂಡಿಕೆ ಮೇಲಿನ ಬಡ್ಡಿದರಗಳನ್ನು ನಿಗದಿಪಡಿಸಲಾಗಿದೆ. ಅಂಚೆ ಕಚೇರಿಯ ಐದು ಪ್ರಮುಖ ಯೋಜನೆಗಳು ಹಾಗೂ ಅವುಗಳ ಮೇಲಿನ ಬಡ್ಡಿದರದ ಕುರಿತ ಮಾಹಿತಿ ಇಲ್ಲಿದೆ ನೋಡಿ.
- ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)
ಈಗಿನ ಬಡ್ಡಿ ದರ: 7.1%
ಲಾಕ್-ಇನ್ ಅವಧಿ: 15 ವರ್ಷ
ಗರಿಷ್ಠ ಹೂಡಿಕೆ: ವರ್ಷಕ್ಕೆ 1.5 ಲಕ್ಷ ರೂಪಾಯಿ
• 80 ಸಿ ಅನ್ವಯ ತೆರಿಗೆ ವಿನಾಯಿತಿ ಲಾಭ ಪಡೆಯಬಹುದು - ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ)
ಈಗಿನ ಬಡ್ಡಿ ದರ: 7.7%
ಲಾಕ್ ಇನ್ ಅವಧಿ: 5 ವರ್ಷ
ಕನಿಷ್ಠ ಹೂಡಿಕೆ: 1,000 ರೂಪಾಯಿ
ಗರಿಷ್ಠ ಹೂಡಿಕೆ: ಮಿತಿ ಇಲ್ಲ - ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿ ಎಸ್ ಎಸ್)
ಈಗಿನ ಬಡ್ಡಿ ದರ: 8.2%
ಲಾಕ್ ಇನ್ ಅವಧಿ: 5 ವರ್ಷ
ಗರಿಷ್ಠ ಠೇವಣಿ: ಕನಿಷ್ಠ 1,000 ರೂಪಾಯಿ
ಗರಿಷ್ಠ ಮಿತಿ: 30 ಲಕ್ಷ ರೂಪಾಯಿ
ಲಾಕ್-ಇನ್ ಅವಧಿ: 2 ವರ್ಷ - ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ)
ಈಗಿನ ಬಡ್ಡಿ ದರ: 8.2%
ಯಾರಿಗೆ ಅನ್ವಯ: 10 ವರ್ಷದೊಳಗಿನ ಹೆಣ್ಣು ಮಗು
ಅವಧಿ: 18 ವರ್ಷ ಅಥವಾ 21 ವರ್ಷದ ನಂತರ - ರಿಕರಿಂಗ್ ಡೆಪಾಸಿಟ್
ಈಗಿನ ಬಡ್ಡಿ ದರ: 6.7%
ಲಾಕ್ ಇನ್ ಅವಧಿ: 5 ವರ್ಷ (3 ವರ್ಷದ ನಂತರ ವಿತ್ ಡ್ರಾ ಸಾಧ್ಯ)



















