ಪುಣ್ಯ ಕ್ಷೇತ್ರಗಳಾದ ಉಡುಪಿ, ಧರ್ಮಸ್ಥಳ, ಕೊಲ್ಲೂರು ದೇವಸ್ಥಾನಗಳಿಗೆ ಭೇಟಿ ನೀಡಬೇಡಿ ಎಂದು ಕಿಡಿಗೇಡಿಗಳು ಅವಹೇಳನಕಾರಿಯಾಗಿ ಫೇಸ್ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಹಿರಿಯಡ್ಕದ ಬೆಳ್ಳರಪಾಡಿಯ ನಿವಾಸಿ ಶ್ರೀಕುಮಾರ್ ಕೇರಳದ ಇಬ್ಬರು ವ್ಯಕ್ತಿಗಳ ಮೇಲೆ ದೂರು ದಾಖಲಿಸದ್ದಾರೆ. ಮಲ್ಲು ಮಾರ್ಟ್ ಟ್ರಾವೆಲರ್ ಮತ್ತು ಮಾನಾಫ್ ಎಂಬ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಮಲ್ಲು ಮಾರ್ಟ್ ಟ್ರಾವೆಲ್ಲರ್ ಉಡುಪಿ ಹಾಗೂ ಮಂಗಳೂರು ಕ್ಷೇತ್ರಗಳಿಗೆ ಕುಟುಂಬ ಸಮೇತರಾಗಿ ತೆರಳಬೇಡಿ. ಹೆಣ್ಣು ಮಕ್ಕಳಿಗೆ ಅಲ್ಲಿ ಸುರಕ್ಷತೆಯಿಲ್ಲ ಎಂದು ಹೇಳಿದ್ದಾನೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಯಾಗಿದ್ದು ಕೂಡಲೇ ಪೋಲೀಸರು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.