ಬಾಗಲಕೋಟೆ : ಹುಂಜಗಳ ಕಾದಾಟದ ಜೂಜಾಟದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಜೂಜಾಡುತ್ತಿದ್ದವರನ್ನು ಒದ್ದು ಒಳಗೆ ಹಾಕಬೇಕಾದ ಪೊಲೀಸ್ ಅದರಲ್ಲೇ ಭಾಗಿಯಾಗಿದ್ದು, ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ ಜೂಜಾಟವನ್ನು ಕಾನ್ ಸ್ಟೇಬಲ್ ಆಯೋಜನೆ ಮಾಡಿದ್ದ ಎಂಬ ಆರೋಪ ಕೂಡ ಕೇಳಿ ಬಂದಿದೆ. ಪ್ರಭು ಪವಾರ್ ಎಂಬ ಪೊಲೀಸ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಪ್ರಭು ಬಾಗಲಕೋಟೆ ಗ್ರಾಮೀಣ ಠಾಣೆ ಕಾನ್ ಸ್ಟೇಬಲ್ ಎನ್ನಲಾಗಿದೆ.
ಜೂಜಾಟಗಾರರ ಜೊತೆ ಮಾಲೆ ಹಾಕಿಕೊಂಡು ಪೊಲೀಸ್ ಕಾನ್ ಸ್ಟೇಬಲ್ ಪೋಸ್ ಕೊಟ್ಟಿದ್ದಾನೆ. ಈ ಹೇಳೆ ಲಕ್ಷಾಂತರ ರೂ. ಬಾಜಿ ಕಟ್ಟಲಾಗಿದೆ ಎನ್ನಲಾಗಿದೆ. ಜಿಲ್ಲೆಯ ಅಮಿನಗಢ ಪಟ್ಟಣದಲ್ಲಿ ಈ ಘಟನೆ ನಡೆದಿದೆ.