ಕೊಪ್ಪಳ : ದೆಹಲಿ ಕೆಂಪುಕೋಟೆ ಹತ್ತಿರ ಭೀಕರ ಸ್ಫೋಟ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಟ್ಟೆಚರವಹಿಸಲಾಗಿದ್ದು, ಪೋಲಿಸ್ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಆರು ಜನ ಇರುವ ಯುವಕರ ತಂಡದಲ್ಲಿ ಗಾಂಜಾ ಪತ್ತೆಯಾಗಿದೆ.
ಕೊಪ್ಪಳ ಬಸ್ ನಿಲ್ದಾಣದಲ್ಲಿ ಡಾಗ್ ಸ್ಕಾಡ್ ದಿಂದ ಭಾರಿ ಪರಿಶೀಲನೆ ನಡೆಸಲಾಗುತ್ತಿತ್ತು. ಯಲಬುರ್ಗಾ ಕ್ಕೆ ಕೆಲಸಕ್ಕೆ ಹೋಗುತ್ತಿದ್ದ, ಜಾರ್ಖಂಡ್ ಯುವಕರ ಬ್ಯಾಗ್ ನಲ್ಲಿ ಗಾಂಜಾ ಪತ್ತೆಯಾಗಿದೆ. ಬಿಂದು ಶ್ವಾನ ವಾಸನೆ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದೆ. ನಿನ್ನೆ ತಡರಾತ್ರಿಯಿಂದಲೇ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ.
ಪ್ರತಿಯೊಬ್ಬರ ಮೇಲೆ ನಿಗಾ ಇಡುವುಂತೆ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಸೂಚನೆ ಹೊರಡಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಚೆಕ್ ಪೋಸ್ಟ್ ಬಂದೋಬಸ್ತ್ ಮಾಡಿ ಪ್ರಯಾಣಿಕರ ವಾಹನ ತಪಾಸಣೆ ಮಾಡುವಂತೆ ಸೂಚನೆ ನೀಡಾಲಾಗಿದೆ.
ಇದನ್ನೂ ಓದಿ : ಸಂಗಾತಿಗಳ ಬಂಧನದಿಂದ ಆತಂಕಗೊಂಡು ವೈದ್ಯನಿಂದಲೇ ದಿಲ್ಲಿ ಬಾಂಬ್ ಸ್ಫೋಟ?



















