ದಾವಣಗೆರೆ: ಜಿಲ್ಲೆಯ ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, 13 ಕೋಟಿ ರೂ. ಮೌಲ್ಯದ 17 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ತಮಿಳು ನಾಡು ಮೂಲದ ತಮಿಳುನಾಡಿನ ಮಧುರೈ ನಿವಾಸಿ, ನ್ಯಾಮತಿಯಲ್ಲ ವಾಸಿಸುತ್ತಿದ್ದ 30 ವರ್ಷದ ವಿಜಯ್ ಹಾಗೂ ಅವರ ಸಹೋದರ 28 ವರ್ಷದ ಅಜಯ್ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಮತಿ ತಾಲೂಕಿನನ ಸುರಹೊನ್ನೆ ಗ್ರಾಮದ ನಿವಾಸಿಗಳಾದ ಮಂಜುನಾಥ್, ಚಂದ್ರು, ಬೆಳಗುತ್ತಿ ಗ್ರಾಮದ ಅಭಿಷೇಕ ಸೇರಿದಂತೆ 6 ಜನ ಸೇರಿ ಬರೋಬ್ಬರಿ 13 ಕೋಟಿ ರೂ. ಚಿನ್ನಾಭರಣ ದೋಚಿದ್ದರು.
ಆರೋಪಿಗಳು ದಾಳಿ ಮಾಡುವ ವೇಳೆ ಮೊಬೈಲ್ ಬಳಕೆ ಮಾಡಿರಲಿಲ್ಲ. ಸಿಸಿ ಕ್ಯಾಮರಾ ಡಿವಿಆರ್ ನಾಪತ್ತೆ ಮಾಡಿದ್ದರು. ಖಾರದ ಪುಡಿ ಹಾಕಿ ಸಾಕ್ಷಿ ನಾಶ ಮಾಡಿದ್ದರು. ಈ ಪ್ರಕರಣ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿತ್ತು. ಆದರೂ ಸಾಕ್ಷಿಯೊಂದು ಸಿಕ್ಕಿತ್ತು. ಆ ಸಾಕ್ಷಿಯಿಂದಾಗಿ ಈಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಯೂಟ್ಯೂಬ್ ನಲ್ಲಿ ಬ್ಯಾಂಕ್ ದರೋಡೆ ಬಗ್ಗೆ ನೋಡುತ್ತಿದ್ದರು. NETFLIX ನ MONEY HEIST ಈ ಖದೀಮರಿಗೆ ಸ್ಪೂರ್ತಿಯಾಗಿದೆ. ಇದರಲ್ಲಿನ ಆರೋಪಿಯೋರ್ವ ಡಸ್ಟರ್ ಕಾರು ತೆಗೆದುಕೊಂಡು ದರೋಡೆ ಮಾಡಿ ಸಿಸಿ ಕ್ಯಾಮರಾ ಇಲ್ಲದ ರಸ್ತೆಯಲ್ಲಿ ಸಂಚಾರಿಸಿ 17.70 ಕೆಜಿ ಚಿನ್ನವನ್ನ ಒಂದು ಬಾಕ್ಸ್ ಮಾಡಿ ಅದಕ್ಕೆ ವಿಶೇಷ ಪೂಜೆ ಮಾಡಿ, ಕಾರಿನಲ್ಲಿ ತನ್ನ ಸ್ವಗ್ರಾಮವಾದ ತಮಿಳುನಾಡಿನ ಮಧುರೈ ಬಳಿ ಹಳ್ಳಿಗೆ ಹೋಗಿ ನಿರ್ಜನ ಪ್ರದೇಶದಲ್ಲಿ ಇದ್ದ ಹಾಳು ಬಾವಿಯಲ್ಲಿ ಚಿನ್ನ ತುಂಬಿದ ಬಾಕ್ಸ್ ಇಟ್ಟು ಹೋಗಿದ್ದಾನೆ.
ಆನಂತರ ಇವರೆಲ್ಲ ಸೇರಿ 2 ವರ್ಷಗಳವರೆಗೆ ಹೊರಗೆ ತೆಗೆಯದಂತೆ ನಿರ್ಧಾರ ಮಾಡಿದ್ದಾರೆ. ವಿಜಯ್ ಎಂಬಾತ ಈ ಚಿನ್ನವನ್ನು ಅಡಗಿಸಿಟ್ಟಿದ್ದಾನೆ. ಇನ್ನೊಂದೆಡೆ ಪೊಲೀಸರು ಹಲವಾರು ರಾಜ್ಯಗಳನ್ನು ಸುತ್ತಿದರೂ ಈ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಆನಂತರ ಪೊಲೀಸರು ತನಿಖೆ ನಡೆಸಿದಾಗ ಸಾಲ ಕೇಳಿದಾಗ ಸಾಲ ನೀಡಿದ್ದಕ್ಕೆ ಸಿಟ್ಟಾಗಿ ದರೋಡೆ ಮಾಡಿದ್ದಾರೆಂಬ ವಿಷಯ ಗೊತ್ತಾಗಿದೆ.
ಗ್ಯಾಸ್ ಕಟ್ಟರ್ ಬಳಸಿ ಕೋಟ್ಯಾಂತರ ರೂ. ಮೌಲ್ಯದ 17 ಕೆಜಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು ಎಂಬುವುದು ಬಯಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.