ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದ್ದು, 31 ಮಂದಿ ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮಂಗಳವಾರ ಆದೇಶ ಹೊರಡಿಸಿದ್ದಾರೆ.


ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಸ್ಥಳಗಳನ್ನು ನಿಯುಕ್ತಿಗೊಳಿಸಿ ಆದೇಶದಲ್ಲಿ ತಿಳಿಸಲಾಗಿದ್ದು, ವರ್ಗಾವಣೆಗೊಂಡ 31 ಮಂದಿ ಡಿವೈಎಸ್ಪಿ(ಸಿವಿಲ್)ಗಳ ಪೈಕಿ ಕೆಲವು ಅಧಿಕಾರಿಗಳನ್ನು ಲೋಕಾಯುಕ್ತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಡಿವೈಎಸ್ಪಿ ಗಳನ್ನು ವರ್ಗಾವಣೆ ಮಾಡಲಾಗಿದ್ದು, ಮಾರತ್ತಹಳ್ಳಿ ಸಬ್ ಡಿವಿಷನ್ ಎಸಿಪಿ ಯಾಗಿದ್ದ ಪ್ರಿಯದರ್ಶಿನಿ ಅವರನ್ನು ಕಬ್ಬನ್ ಪಾರ್ಕ್ ಸಬ್ ಡಿವಿಷನ್ ಗೆ ಎಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ ಆದಾಗಿಂದ ಎಸಿಪಿ ನೇಮಕವಾಗಿರಲಿಲ್ಲ. ಇಷ್ಟು ದಿನ ಕಬ್ಬನ್ ಪಾರ್ಕ್ ಎಸಿಪಿಯಾಗಿ ರಾಮಕೃಷ್ಣಗೆ ಇನ್ಚಾರ್ಜ್ ನೀಡಲಾಗಿತ್ತು. ಇದೀಗ ಪ್ರಿಯಾದರ್ಶನಿ ಅವರನ್ನು ನೇಮಕ ಮಾಡಿ ಸರ್ಕಾರದ ಆದೇಶ ಹೊರಡಿಸಿದೆ. ಇದನ್ನೂ ಓದಿ : ಡಿ ಬಾಸ್ ಜಾಮೀನು ಕ್ಯಾನ್ಸಲ್ ಮಾಡಿದ ಸುಪ್ರೀಂಕೋರ್ಟ್ | ದರ್ಶನ್ ಮುಂದಿನ ಭವಿಷ್ಯವೇನು..?



















