ಬೀದರ್: ಹೃದಯಾಘಾತಕ್ಕೆ ಪೊಲೀಸ್ ಪೇದೆ ಬಲಿಯಾಗಿರುವ ಘಟನೆ ನಡೆದಿದೆ.
ನಗರ ಠಾಣೆಯ ಪೇದೆ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಪೊಲೀಸ್ ಪೇದೆ ರಾಯಚೂರು ಜಿಲ್ಲೆಯ ತಳಮಾಳ ಗ್ರಾಮದ ಚಂದ್ರಶೇಖರ (28ವರ್ಷ) ಸಾವನ್ನಪ್ಪಿರುವ ವ್ಯಕ್ತಿ. ಇವರು 2018ರ ಬ್ಯಾಚ್ ನ ಪೇದೆಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ 5 ವರ್ಷಗಳಿಂದ ನಾಗರಿಕ ಪೊಲೀಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರು.
ಹೃದಯಾಘಾತದಿಂದ ತೀವ್ರವಾಗಿ ಅಸ್ವಸ್ಥ ರಾಗಿದ್ದ ಅವರನ್ನು ಕೂಡಲೇ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.