ಕೊಪ್ಪಳ : ಬೀದಿ ಬದಿ ವ್ಯಾಪಾರಿಗಳ ಮೇಲೆ ಪೊಲೀಸರ ದರ್ಪ ತೋರಿರುವ ಘಟನೆ ಕುಷ್ಟಗಿ ನಗರದ ಸಂತೆ ಬಜಾರ್ ವಾಲ್ಮೀಕಿ ಸರ್ಕಲ್ನಲ್ಲಿ ನಡೆದಿದೆ. ASI ಕುಂಡ್ಲಿಕಪ್ಪ ವ್ಯಾಪಾರಿಗಳ ಸಾಮಗ್ರಿಗಳನ್ನು ಮನಬಂದಂತೆ ಕಿತ್ತೆಸೆದಿದ್ದಾನೆ.
ದೀಪಾವಳಿ ಹಿನ್ನಲೆ ಇಂದು ಸಂತೆ ಬಜಾರ್ನಲ್ಲಿ ಜನಜಂಗುಳಿ ಇತ್ತು. ಪ್ರತಿ ರವಿವಾರ ಸಂತೆ ವೇಳೆ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ವ್ಯಾಪಾರ ಮಾಡ್ತಿದ್ದರು. ಇಂದು ರಸ್ತೆಯ ಬದಿಯಲ್ಲಿ ಹಾಗೂ ಡಿವೈಡರ್ ಮೇಲೆ ವ್ಯಾಪಾರ ಮಾಡ್ತಿದ್ದವರ ಮೇಲೆ ಕುಷ್ಟಗಿ ಪೊಲೀಸ್ ಠಾಣೆಯ ASI ಕುಂಡ್ಲಿಕಪ್ಪ ಸಾಮಾಗ್ರಿಗಳನ್ನು ಕಿತ್ತೆಸೆದು ಅಟ್ಟಹಾಸ ಮೆರೆದಿದ್ದಾನೆ.
ಪೀಲಿಸನ ಈ ಅಮಾನವೀಯ ವರ್ತನೆಯನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ವ್ಯಾಪಾರಸ್ಥರಿಗೆ ತಿಳಿಸಿ ಹೇಳಿದ್ರೆ ಸಾಕಾಗ್ತಿತ್ತು, ಮನಸ್ಸೊ ಇಚ್ಚೆ ಬಂದಂತೆ ಸಾಮಗ್ರಿಗಳನ್ನು ಬಿಸಾಡೋದು ಬೇಕಿತ್ತಾ? ಎಂದು ಸಾರ್ವಜನಿಕರು ಆಕ್ರೋಶಿಸಿದ್ದಾರೆ.