ಇಂದು ಸಂಜೆ 6 ಜನ ನಕ್ಸಲರನ್ನು ಪೊಲೀಸರು ಸಿಎಂ ಗೃಹ ಕಚೇರಿ ಕೃಷ್ಣಾಗೆ ಕರೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿದ್ದಾರೆ. ಪೋಲೀಸರ ಬಿಗಿ ಭದ್ರತೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಗೆ ನಕ್ಸಲರನ್ನು ಕರೆ ತರಲಾಗಿದೆ.
6 ಜನ ನಕ್ಸಲರ ತಂಡ ಗೃಹ ಕಚೇರಿ ಕೃಷ್ಣಾಕ್ಕೆ ಬಂದಿದ್ದಾರೆ. ಒಟ್ಟು 17 ಪೊಲೀಸ್ ವಾಹನಗಳಲ್ಲಿ ನಕ್ಸಲರು ಆಗಮಿಸಿದ್ದಾರೆ. ಸಿಎಂ ಭೇಟಿಗೆ ನಕ್ಸಲ್ ಕುಟುಂಬ ಆಗಮಿಸಿರುವ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಆಗಮಿಸಿದ್ದಾರೆ.
6 ಜನ ನಕ್ಸಲರು ಕೂಡ ಕೃಷ್ಣಗೆ ಆಗಮಿಸಿದ್ದಾರೆ. ಪೊಲೀಸರು ನಕ್ಸಲರನ್ನು ಪರಿಶೀಲಿಸಿ ಒಳಗೆ ಬಿಟ್ಟಿದ್ದಾರೆ. ಭಾಗ್ಯಮ್ಮ (32), ನವ್ಯ (19), ಹೇಮಾವತಿ(22), ಗಂಗರಾಜು (42) ಸೇರಿದಂತೆ 6 ಜನ ನಕ್ಸಲರು ಶರಣಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಭೇಟಿ ನೀಡಿದ್ದಾರೆ.