ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಬೇಲ್ ರದ್ದಾಗುತ್ತಿದ್ದಂತೆ ದರ್ಶನ್ ಮತ್ತೆ ಜೈಲು ಸೇರಿದ್ದು, ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಹಿಂದೆ ನಡೆದಿದ್ದ ತಪ್ಪು ಮರುಕಳಿಸಬಾರದು ಎಂದು ಅಲ್ಲಿನ ಸಿಬ್ಬಂದಿಗಳಿಗೆ ಎಡಿಜಿಪಿ ದಯಾನಂದ್ ವಾರ್ನ್ ಮಾಡಿದ್ದಾರೆ.
ದರ್ಶನ್ ಸೆಲ್ ಬಳಿ ಯಾರೂ ಅನಾವಶ್ಯಕವಾಗಿ ಹೋಗುವಂತಿಲ್ಲ. ದರ್ಶನ್ ಸೆಲ್ ಬಳಿ ಯಾವ ಸಿಬ್ಬಂದಿ ನಿಯೋಜನೆ ಮಾಡಲಾಗಿದೆಯೋ ಅವರು ಮಾತ್ರ ಹೋಗಿ ಕೆಲಸ ಮಾಡಬೇಕು. ಅನವಶ್ಯಕ ಓಡಾಟ, ಮಾತುಕತೆ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ಜೈಲೂಟ, ತಿಂಡಿ ಮಾತ್ರ ಕೊಡಬೇಕು. ಜೈಲಿನ ಎಲ್ಲ ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ದಯಾನಂದ್ ಸೂಚಿಸಿದ್ದಾರೆ. ದರ್ಶನ್ ಗೆ ಈ ಹಿಂದೆ ಐಷಾರಾಮಿ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕೆ 9 ಜನ ಅಧಿಕಾರಿಗಳು ಸಸ್ಪೆಂಡ್ ಆಗಿದ್ದರು. ಈ ಕುರಿತು ಮೂರು ಪ್ರಕರಣಗಳು ಕೂಡ ದಾಖಲಾಗಿದ್ದವು. ಹೀಗಾಗಿ ಸುಪ್ರೀಂಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಜೈಲಿನಲ್ಲೂ ಸಂಕಷ್ಟ ಶುರುವಾಗಿದೆ. ಈಗಾಗಲೇ ದರ್ಶನ್ ಮತ್ತು ಪವಿತ್ರಾ ಜೈಲಿನಲ್ಲಿ 48 ಗಂಟೆಗಳನ್ನು ಕಳೆದಿದ್ದಾರೆ.


















