ನವದೆಹಲಿ : ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಂತಾರಾಷ್ಟ್ರೀಯ ನಾಯಕರಾಗಿ ತಮ್ಮ ಸ್ಥಾನಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿರುವ ನರೇಂದ್ರ ಮೋದಿ ಅವರು, 71 ಶೇಕಡಾ ರೇಟಿಂಗ್‌ನೊಂದಿಗೆ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಅಮೆರಿಕ ಮೂಲದ ಮಾರ್ನಿಂಗ್ ಕನ್ಸಲ್ಟ್ (Morning Consult)ನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ನಡೆಸಿದ ನವೆಂಬರ್‌ನ ಸಮೀಕ್ಷೆಯ ಪ್ರಕಾರ ಪ್ರಧಾನಿ ಮೋದಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಈ ಪಟ್ಟಿಯು ನವೆಂಬರ್ 6ರಿಂದ 12ರವರೆಗೆ ಸಂಗ್ರಹಿಸಿದ ಡೇಟಾವನ್ನು ಆಧರಿಸಿದೆ. ಶೇ. 71ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅನುಮೋದಿಸಿದರೆ, ಶೇ. 22ರಷ್ಟು ಜನರು ಅವರನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಶೇ. 7ರಷ್ಟು ಮಂದಿ ಯಾವುದೇ ಅಭಿಪ್ರಾಯ ನೀಡಿಲ್ಲ.
ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ. 63ರಷ್ಟು ಮಂದಿಯ ಅನುಮೋದನೆ ಪಡೆದ ಜಪಾನ್ ಪ್ರಧಾನಿ ಸನೇ ತಕೈಚಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನು ಕ್ಷಿಣ ಕೊರಿಯಾದ ಲೀ ಜೇ ಮ್ಯುಂಗ್ ಶೇ. 58ರಷ್ಟು ರೇಟಿಂಗ್‌ನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ 4ನೇ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾದ ಜೇವಿಯರ್ ಮಿಲೀ 5ನೇ ಸ್ಥಾನದಲ್ಲಿದ್ದಾರೆ.
ಇನ್ನು ಪಟ್ಟಿಯಲ್ಲಿ ಕೆನಡಾದ ಮಾರ್ಕ್ ಕ್ಯಾರ್ನಿ 6 ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಕರಿನ್ ಕೆಲ್ಲರ್-ಸುಟರ್ 7ನೇ ರ‍್ಯಾಂಕ್ ಪಡೆದಿದ್ದಾರೆ. 8ನೇ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. 9 ಮತ್ತು 10ನೇ ಸ್ಥಾನದಲ್ಲಿ ಮೆಕ್ಸಿಕೊದ ಕ್ಲೌಡಿಯಾ ಶೀನ್‌ಬಾಮ್ ಹಾಗೂ ಬ್ರೆಜಿಲ್‌ನ ಲುಲಾ ಡಾ ಸಿಲ್ವಾ ಇದ್ದಾರೆ.
ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್‌ನ ಟಾಪ್ ನಾಯಕರು
- ನರೇಂದ್ರ ಮೋದಿ (ಭಾರತ)
- ಸನೇ ತಕೈಚಿ (ಜಪಾನ್)
- ಲೀ ಜೇ-ಮ್ಯುಂಗ್ (ದಕ್ಷಿಣ ಕೊರಿಯಾ)
- ಆಂಥೋನಿ ಅಲ್ಬನೀಸ್ (ಆಸ್ಟ್ರೇಲಿಯಾ)
- ಜೇವಿಯರ್ ಮಿಲೀ (ಅರ್ಜೆಂಟೀನಾ)
- ಮಾರ್ಕ್ ಕಾರ್ನಿ (ಕೆನಡಾ)
- ಕರಿನ್ ಕೆಲ್ಲರ್-ಸುಟರ್ (ಸ್ವಿಟ್ಜರ್‌ಲ್ಯಾಂಡ್)
- ಡೊನಾಲ್ಡ್ ಟ್ರಂಪ್ (ಯುಎಸ್)
- ಕ್ಲೌಡಿಯಾ ಶೀನ್‌ಬಾಮ್ (ಮೆಕ್ಸಿಕೊ)
- ಲುಲಾ ಡಾ ಸಿಲ್ವಾ (ಬ್ರೆಜಿಲ್)
ಇದನ್ನೂ ಓದಿ : ಬೆಂಗಳೂರನ್ನೇ ಬೆಚ್ಚಿಬೀಳಿಸಿದ 7 ಕೋಟಿ ಹಗಲು ದರೋಡೆ | ಶಂಕಿತ ಆರೋಪಿಗಳ ಫೋಟೋ ಬಿಡುಗಡೆಗೊಳಿಸಿದ ಪೊಲೀಸರು!


















