Narendra Modi: ರಾಜಕೀಯ ವಿರೋಧ ಹಾಗೂ ವೈಯಕ್ತಿಕ ಸಂಬಂಧದ ನಡುವೆ ತುಂಬ ಚಿಕ್ಕದಾದ ಗೆರೆ ಇರುತ್ತದೆ. ಆ ಗೆರೆಯನ್ನೂ ದಾಟಿ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದುವ, ಸ್ನೇಹ-ಸೌಹಾರ್ದತೆ ಕಾಪಾಡಿಕೊಳ್ಳುವ ರಾಜಕಾರಣಿಗಳ ಸಂಖ್ಯೆ ಈಗ ಕಡಿಮೆ. ಅಂತಹ ಕಡಿಮೆ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಇದ್ದಾರೆ. ಎನ್ ಸಿಪಿ ವರಿಷ್ಠ ಶರದ್ ಪವಾರ್ ಅವರು ಕುಳಿತುಕೊಳ್ಳಲು ಸಹಾಯ ಮಾಡಿ, ಅವರಿಗೆ ನೀರು ಕೊಟ್ಟಿದ್ದೇ ನರೇಂದ್ರ ಮೋದಿ ಅವರ ಸ್ನೇಹ-ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಹೌದು, ದೆಹಲಿಯಲ್ಲಿ ನಡೆದ ಅಖಿಲ ಭಾರತೀಯ ಮರಾಠಿ ಸಮ್ಮೇಳನದಲ್ಲಿ ನರೇಂದ್ರ ಮೋದಿ ಅವರು ಶರದ್ ಪವಾರ್ ಅವರಿಗೆ ಮಾಡಿದ ಸಹಾಯ, ತೋರಿದ ಸೌಹಾರ್ದತೆಯ ವಿಡಿಯೊ ಭಾರಿ ವೈರಲ್ ಅಲ್ಲದೆ. ನರೇಂದ್ರ ಮೋದಿ ಅವರು ಹೊಂದಿರುವ ಸಹಾಯದ ಗುಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಶರದ್ ಪವಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿ, ಆಸನದಲ್ಲಿ ಕುಳಿತುಕೊಳ್ಳಲು ಮುಂದಾದರು. ಆಗ 84 ವರ್ಷದ ಶರದ್ ಪವಾರ್ ಅವರು ಆರಾಮವಾಗಿ ಕುಳಿತುಕೊಳ್ಳಲು ಮೋದಿ ನೆರವು ನೀಡಿದರು. ಅವರ ಕೈ ಹಿಡಿದು ಕೂರಿಸಿದರು. ಇದಾದ ಬಳಿಕ ಗ್ಲಾಸ್ ಗೆ ನೀರು ಹಾಕಿ, ಶರದ್ ಪವಾರ್ ಅವರಿಗೆ ನೀಡಿದರು. ಆಗ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೆಲ ವರ್ಷಗಳ ಹಿಂದೆ ಭೇಟಿಗಾಗಿ ನರೇಂದ್ರ ಮೋದಿ ನಿವಾಸಕ್ಕೆ ತೆರಳಿದ್ದರು. ಆಗ ಪ್ರಧಾನಿಯು ಇಂತಹದ್ದೇ ಔದಾರ್ಯ ಮೆರೆದಿದ್ದರು. ದೇವೇಗೌಡರು ಮನೆಗೆ ತೆರಳುತ್ತಲೇ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದರು. ಗೌಡರಿಗೆ ಮಂಡಿ ನೋವು ಇರುವ ಕಾರಣ ಅವರ ಕೈಹಿಡಿದು ನಡೆಸಿದ್ದರು. ಇದಾದ ಬಳಿಕ ನರೇಂದ್ರ ಮೋದಿ ಅವರ ಕುರಿತು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದರು.