ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಅಮೆರಿಕಕ್ಕೆ ಹೋಗಿದ್ದ ಸಂದರ್ಭದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಮಾತನಾಡಿದ್ದರು. ಹೀಗಾಗಿ ಸಾಕಷ್ಟು ವಿಱೋದ ವ್ಯಕ್ತವಾಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದಾರೆ.
ಕಾಂಗ್ರೆಸ್ ನಾಯಕ ತನ್ನ ವಿದೇಶಿ ಭೇಟಿಯ ಸಂದರ್ಭದಲ್ಲಿ ಭಾರತಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಇಂದಿನ ಕಾಂಗ್ರೆಸ್ ನಲ್ಲಿ ದೇಶ ಪ್ರೇಮದ ಸ್ಪೂರ್ತಿ ಸತ್ತು ಹೋಗಿದೆ. ಇಂದಿನ ಕಾಂಗ್ರೆಸ್ ನಲ್ಲಿ ದ್ವೇಷದ ದೆವ್ವ ಪ್ರವೇಶಿಸಿದೆ. ಕಾಂಗ್ರೆಸ್ ನಲ್ಲಿ ದೇಶ ವಿರೋಧಿ ಅಜೆಂಡಾ, ಸಮಾಜ ಒಡೆಯುವ, ದೇಶದ ಸಂಸ್ಕೃತಿಗೆ ಅವಮಾನ ಮಾಡುತ್ತಿದೆ ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಗಣೇಶನನ್ನು ಪೋಲೀಸ್ ವ್ಯಾನ್ ನಲ್ಲಿ ಕೂರಿಸುವ ಧೈರ್ಯ ಮಾಡಿದೆ. ತುಷ್ಟೀಕರಣದ ರಾಜಕೀಯಕ್ಕೆ ಯಾವ ಮಟ್ಟಕ್ಕೆ ಇಳಿಯಬಹುದು ಎಂಬುವುದನ್ನು ತೋರಿಸುತ್ತದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಪೊಲೀಸ್ ವ್ಯಾನ್‌ನಲ್ಲಿ ಗಣೇಶ ಮೂರ್ತಿಯನ್ನು ತೋರಿಸುವ ವೈರಲ್ ಫೋಟೋಗೆ ಇದು ಸ್ಪಷ್ಟ ಉಲ್ಲೇಖ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಎಂದರೆ ಸುಳ್ಳು, ವಂಚನೆ ಮತ್ತು ಅಪ್ರಾಮಾಣಿಕತೆ. ತೆಲಂಗಾಣದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ರೈತರು ಸಾಲ ಮನ್ನಾ ಮಾಡಲು ಅಲೆದಾಡುತ್ತಿದ್ದಾರೆ. ಇದು ಹಳೆಯ ಕಾಂಗ್ರೆಸ್ ಅಲ್ಲ. ದೇಶದಲ್ಲಿ ಯಾವುದೇ ಅತ್ಯಂತ ಭ್ರಷ್ಟ ಕುಟುಂಬವಿದ್ದರೆ ಅದು ಕಾಂಗ್ರೆಸ್‌ನ ರಾಜಮನೆತನವಾಗಿದೆ ಎಂದು ಗುಡುಗಿದ್ದಾರೆ.