ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ 2 ಸಾವಿರ ರೂ. ಇನ್ನೂ ಜಮೆಯಾಗಿಲ್ಲ. ದೇಶಾದ್ಯಂತ 10 ಕೋಟಿಗೂ ಅಧಿಕ ರೈತರು ಕೇಂದ್ರ ಸರ್ಕಾರದಿಂದ ಹಣ ಜಮೆಯಾಗಲು ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಸ್ಪಷ್ಟನೆ ನೀಡಿದೆ. ರೈತರು ಕೂಡಲೇ ಇ-ಕೆವೈಸಿ, ಆಧಾರ್ ಸೀಡಿಂಗ್ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಆಯಾ ರಾಜ್ಯ ಸರ್ಕಾರಗಳು ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯುವ ರೈತರು ಇ-ಕೆವೈಸಿ, ಆಧಾರ್ ಸೀಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸುವುದನ್ನು ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ರೈತರು 21ನೇ ಕಂತಿನ ಹಣದಿಂದ ವಂಚಿತರಾಗಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮೂಲಗಳ ಪ್ರಕಾರ, ನವೆಂಬರ್ ಮೊದಲ ವಾರದಲ್ಲಿ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ತಿಳಿದುಬಂದಿದೆ.
ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ರೈರು ಕೆವೈಸಿ ಪೂರ್ಣಗೊಳಿಸುವುದು ಪ್ರಮುಖ ಸಂಗತಿಯಾಗಿದೆ. ನೀವು ಕೂಡ ಪಿಎಂ ಕಿಸಾನ್ ನಿಧಿಯ ಫಲಾನುಭವಿಗಳಾಗಿದ್ದರೆ ಮತ್ತು 21ನೇ ಕಂತಿಗಾಗಿ ಕಾಯುತ್ತಿದ್ದರೆ, ನೀವು ಕೆವೈಸಿ (KYC) ಮಾಡಿಸುವುದು ಬಹಳ ಮುಖ್ಯ. ನೀವು ಇನ್ನೂ ಕೆವೈಸಿ ಮಾಡಿಸದಿದ್ದರೆ, ನಿಮ್ಮ ಹಣ ಖಾತೆಗೆ ಜಮೆಯಾಗದೆ ಸಿಲುಕಿಕೊಳ್ಳಬಹುದು. ಹಾಗಾಗಿ, ಕೂಡಲೇ ಕೆವೈಸಿ ಮಾಡಿಸಿ. ಹೇಗೆ ಮಾಡುವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಕೆವೈಸಿ ಪೂರ್ಣಗೊಳಿಸುವುದು ಹೇಗೆ?
- ಅಧಿಕೃತ ಪಿಎಂ ಕಿಸಾನ್ ಪೋರ್ಟಲ್ ಆಗಿರುವ pmkisan.gov.in ಗೆ ಭೇಟಿ ನೀಡಿ
- ‘ಫಾರ್ಮರ್ಸ್ ಕಾರ್ನರ್’ವಿಭಾಗದ ಅಡಿಯಲ್ಲಿ, ‘ಹೊಸ ರೈತ ನೋಂದಣಿ’ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ, ರಾಜ್ಯ ಮತ್ತು ಬ್ಯಾಂಕ್ ವಿವರಗಳನ್ನು ನಮೂದಿಸಿ.
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
-‘ಸಲ್ಲಿಸು’ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಪರಿಶೀಲಿಸಿದ ನಂತರ, ನೀವು ನಿಮ್ಮ ಕಂತುಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.
ಇದನ್ನೂ ಓದಿ: ಪಟನಾ ಪೈರೇಟ್ಸ್‌ಗೆ ಮಣಿದ ಬೆಂಗಳೂರು ಬುಲ್ಸ್..!ಎಲಿಮಿನೇಟರ್ 3ಕ್ಕೆ ಅರ್ಹತೆ ಗಳಿಸಿದ ಪೈರೇಟ್ಸ್ ತಂಡ



















