ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ನಿವೃತ್ತಿ, ಭವಿಷ್ಯದ ದೃಷ್ಟಿಯಿಂದ ಉದ್ಯೋಗದಾತರು ಹಾಗೂ ಉದ್ಯೋಗಿಗಳು ಮಾಸಿಕ ಇಂತಿಷ್ಟು ಹಣವನ್ನು ಇಪಿಎಫ್ ಒದಲ್ಲ ಹೂಡಿಕೆ ಮಾಡಲಾಗುತ್ತದೆ. ಹೀಗೆ ಹೂಡಿಕೆ ಮಾಡಲಾದ ಮೊತ್ತದಲ್ಲಿ ಒಂದಷ್ಟು ಮೊತ್ತವು ಪಿಎಫ್ ಗೆ, ಇನ್ನೊಂದಿಷ್ಟು ಮೊತ್ತವು ಪಿಂಚಣಿಗೆ ಜಮೆಯಾಗುತ್ತೆ. ಹೀಗೆ, ಜಮೆಯಾದ ಪಿಎಫ್ ಮೊತ್ತವನ್ನು ತುರ್ತು ಸಂದರ್ಭಗಳಲ್ಲಿ ವಿತ್ ಡ್ರಾ ಮಾಡಬಹುದಾಗಿದೆ. ಯಾವಾಗ ಎಷ್ಟು ಮೊತ್ತವನ್ನು ವಿತ್ ಡ್ರಾ ಮಾಡಬಹುದು ಎಂಬುದರ ವಿವರ ಇಲ್ಲಿದೆ.
ನಿವೃತ್ತಿಯ ಸಂದರ್ಭದಲ್ಲಿ ಹಿಂಪಡೆಯುವಿಕೆ
58ನೇ ವರ್ಷದಲ್ಲಿ ನಿವೃತ್ತಿ ಹೊಂದಿದಾಗ ಇಪಿಎಫ್ ಕಾಯ್ದೆಯ ಪ್ರಕಾರ, ಸದಸ್ಯರು ತಮ್ಮ ಅಂತಿಮ ಪಾವತಿಗೆ ಅರ್ಜಿ ಸಲ್ಲಿಸಬೇಕು. ಆಗ ಪೂರ್ತಿ ಹಣವನ್ನು ಹಿಂಪಡೆಯಬಹುದಾಗಿದೆ. ಮಾಸಿಕ ಪಿಂಚಣಿಯೂ ಬರುತ್ತದೆ.
ಉದ್ಯೋಗ ಕಳೆದುಕೊಂಡರೆ ಶೇ.75ರಷ್ಟು ವಿತ್ ಡ್ರಾ
ಯಾವುದೇ ಒಬ್ಬ ಉದ್ಯೋಗಿಯು ದಿಢೀರನೆ ಉದ್ಯೋಗ ಕಳೆದುಕೊಂಡರೆ, ಕೆಲಸ ಮಾಡುವ ಕಂಪನಿ ಮುಚ್ಚಿಹೋದರೆ, ಒಂದು ತಿಂಗಳು ಕೆಲಸವಿಲ್ಲದೆ ಮನೆಯಲ್ಲೇ ಕೂತರೆ ಆಗ ಆ ವ್ಯಕ್ತಿಯು ಪಿಎಫ್ ಮೊತ್ತದಲ್ಲಿ ಶೇ.75ರಷ್ಟು ಹಣವನ್ನು ವಿತ್ ಡ್ರಾ ಮಾಡಬಹುದು. ಎರಡು ತಿಂಗಳಿಗಿಂತ ಹೆಚ್ಚು ಅವಧಿಗೆ ನಿರುದ್ಯೋಗಿಯಾದರೆ ಪೂರ್ತಿ ಹಣವನ್ನು ವಿತ್ ಡ್ರಾ ಮಾಡಬಹುದು.
5 ವರ್ಷದೊಳಗಿನ ವಿತ್ ಡ್ರಾಗೆ ತೆರಿಗೆ ಇದೆ
ಖಾತೆ ತೆರೆದ ಐದು ವರ್ಷಗಳ ಒಳಗೆ ಹಣವನ್ನು ಹಿಂಪಡೆದರೆ, ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, 50 ಸಾವಿರ ರೂ.ಗಿಂತ ಕಡಿಮೆ ಹಣ ಹಿಂಪಡೆದರೆ ಟಿಡಿಎಸ್ ಇರುವುದಿಲ್ಲ. 50 ಸಾವಿರ ರೂ.ಗಿಂತ ಹೆಚ್ಚು ಹಣ ಹಿಂಪಡೆದರೆ, PAN ಕಾರ್ಡ್ ಇದ್ದರೆ ಶೇ.10ರಷ್ಟು ಟಿಡಿಎಸ್, ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಶೇ.30ರಷ್ಟು ಟಿಡಿಎಸ್ ಕಟ್ಟಬೇಕಾಗುತ್ತದೆ.
ಜಾಬ್ ಚೇಂಜ್ ವೇಳೆ ಕೆಲಸ ಸಿಗುವುದು ತಡವಾದಾಗ
ಎರಡು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದರೆ ಅಥವಾ ಹೊಸ ಕೆಲಸ ಸಿಗಲು ಎರಡು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರೆ ಪೂರ್ತಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಬಹುದು. ಹೊಸ ಕೆಲಸ ಸಿಕ್ಕಾಗ, ಹಳೆಯ ಪಿಎಫ್ ಖಾತೆಯ ಹಣವನ್ನು ತಕ್ಷಣ ಹೊಸ ಖಾತೆಗೆ ವರ್ಗಾಯಿಸಬೇಕಾಗಿಲ್ಲ. ಯುಎಎನ್ ಆಕ್ಟಿವೇಟ್ ಆದ ನಂತರ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ವರ್ಗಾಯಿಸಬಹುದು.
ಹೋಮ್ ಲೋನ್ ಮರುಪಾವತಿ
ಖಾತೆ ತೆರೆದ ಮೂರು ವರ್ಷಗಳ ನಂತರ, ಸದಸ್ಯರು ತಮ್ಮ ಮನೆ ಅಗತ್ಯಗಳಿಗಾಗಿ ಇಪಿಎಫ್ ಹಣವನ್ನು ಬಳಸಬಹುದು. ಹೊಸ ಮನೆ ನಿರ್ಮಿಸುವ ವೇಳೆ ಇಎಂಐ ಪಾವತಿಸಲು ಅಥವಾ ಮನೆ ಸಾಲದ ಡೌನ್ ಪೇಮೆಂಟ್ಗೆ ಒಟ್ಟು ಹಣದ ಶೇ.90ರಷ್ಟು ಪಿಎಫ್ ಹಣವನ್ನು ಹಿಂಪಡೆಯಬಹುದು.