ಯಾದಗಿರಿ: ಯಾದಗಿರಿಯಲ್ಲಿ ಮಳೆಯ ಅವಾಂತರಕ್ಕೆ ಯುವಕರು ಮೊಬೈಲ್ ಕಳೆದುಕೊಂಡಿರುವ ಘಟನೆ ನಡೆದಿದೆ.
ಸೇತುವೆ ಮೇಲೆ ನಿಂತ ನೀರಿನಲ್ಲೇ ಯುವಕರು ಮೊಬೈಲ್ ಕಳೆದುಕೊಂಡಿದ್ದಾರೆ. ಮೊಬೈಲ್ ಹುಡುಕುವುದಕ್ಕಾಗಿ ಸೇತುವೆ ಮೇಲಿನ ನೀರನ್ನು ಯುವಕರು ದಬ್ಬಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಈ ಘಟನೆ ನಡೆದಿದೆ.
ಮೊಬೈಲ್ ನಲ್ಲಿ ಬಕೆಟ್, ಚೆಂಬು ಮೂಲಕ ಯುವಕರು ನೀರು ದಬ್ಬಲು ಯತ್ನಿಸಿದ್ದಾರೆ. ಬೈಕ್ ಮೇಲೆ ಹೋಗುತ್ತಿದ್ದಾಗ ಸೇತುವೆ ಮೇಲೆ ಐಪೋನ್ ಬಿದ್ದಿದೆ. ಬೆಲೆ ಬಾಳುವ ಐಪೋನ್ ನೀರಲ್ಲಿ ಬಿದ್ದಿದ್ದರಿಂದಾಗಿ ಹುಚ್ಚೆದ್ದ ಯುವಕರು ನೀರಲ್ಲಿ ಹುಡುಕುತ್ತಿದ್ದಾರೆ.



















