ಖಾಸಗಿ ವಿಶ್ವ ವಿದ್ಯಾಲಯಗಳ ಶೇಕಡ 40ಲಷ್ಟು ಹಾಗೂ ಸರಕಾರಿ ವಿಶ್ವವಿದ್ಯಾಲಯಗಳ ಸಂಪೂರ್ಣ ಪಿಎಚ್ ಡಿ ಸೀಟುಗಳಿಗೆ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಏಕರೂಪದ ಸಾಮಾನ್ಯ ಪರೀಕ್ಷೆ ಜಾರಿಗೆ ತರಲು ತೀರ್ಮಾನಿಸಿದಂತಿದ್ದು, ರಾಜ್ಯದ ನಲವತ್ತೊಂದು ಸರ್ಕಾರಿ ಮತ್ತು ಇಪ್ಪತ್ತೇಳು ಖಾಸಗಿ ವಿಶ್ವ ವಿದ್ಯಾಲಯಗಳ ಪೈಕಿ ಈವರೆಗೆ ವಿವಿ ವ್ಯಾಪ್ತಿಯಲ್ಲೇ ಪಿಎಚ್ ಡಿಗೆ ಅರ್ಜಿ ಆಹ್ವಾನಿಸಿ, ಕೌನ್ಸಲಿಂಗ್ ನಡೆಸಿ ಸೀಟು ಹಂಚಿಕೆ ಮಾಡುತ್ತಿದ್ದವು. ಹಾಗಾಗಿ ಬೆಂಗಳೂರು ವಿವಿ ಸೇರಿದಂತೆ ಎಲ್ಲವೂ ವಿವಿ ವ್ಯಾಪ್ತಿ ಅಡಿಯೇ ನಡೆದು ಹೋಗುತ್ತಿದ್ದ ಪರೀಕ್ಷೆಗಳಲ್ಲಿ ಅಕ್ರಮದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಏಕೀಕೃತದಂತಹ ಮಹತ್ವದ ತೀರ್ಮಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಬಂದಿದೆ ಎನ್ನಲಾಗಿದ್ದು, ಅಕ್ರಮಗಳನ್ನು ತಡೆದು ಏಕೀಕೃತ ಪರೀಕ್ಷೆ ನಡೆಸಿ ಕೌನ್ಸಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲು ಇಲಾಖೆ ನಿರ್ಧರಿಸಿದೆ ಎನ್ನಬಹುದು. ಹೊರ ವಿಶ್ವವಿದ್ಯಾಲಯಗಳಿಗೆ ಸೀಟು ಹಂಚಿಕೆ ನಿಯಮಗಳು ಸೀಟು ಹಂಚಿಕೆ ಏಕರೂಪದ ಸಿಇಟಿಯಲ್ಲಿರದ ಕಾರಣ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಮಾತ್ರ ಸೀಟು ಸಿಗಲಿದೆ. ಈ ಮೊದಲು ಆಯಾ ವಿವಿ ಮುಖ್ಯಸ್ಥರ ಸಮ್ಮುಖದಲ್ಲಿ ಸೀಟು ಹಂಚಿಕೆ ನಡೆಯುತ್ತಿತ್ತು. ಈಗ ಏಕರೂಪದಲ್ಲಿ ಆನ್ಲೈನ್ ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅದರಂತೆ ಇಲಾಖೆ ನಿಯಮಗಳನ್ನು ರೂಪಿಸುತ್ತಿದ್ದು, ಒಂದೆರಡು ತಿಂಗಳಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಇನ್ನು ಈ ಏಕರೂಪ ಮಾದರಿಯ ಸಿಇಟಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗುವುದು ಎನ್ನಲಿಗುತ್ತಿದೆ.
ಒಟ್ಟಾರೆಯಾಗಿ ವಿವಿಗಳಲ್ಲಿ ಸೀಟು ಹಂಚಿಕೆಗಳಲ್ಲಿ ನಡೆದು ಬರುತ್ತಿದ್ದ ಅಕ್ರಮ ತಡೆಯಲು, ಉನ್ನತ ಶಿಕ್ಷಣ ಇಲಾಖೆಯ ತೆಗೆದುಕೊಂಡ ಮಹತ್ವದ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ನೈಜ ಪ್ರತಿಭೆಗಳಿಗೆ ಸಹಾಯವಾಗಲಿದೆ