ಬೀದರ್ : ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಭಾರತವು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದರ ಪರಿಣಾಮಗಳು ಸ್ಪಷ್ಟವಾಗಿ ಗೋಚರವಾಗತೊಡಗಿವೆ. ಹೌದು.. ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನಲ್ಲಿ ಪೆಟ್ರೋಲ್-ಡೀಸೆಲ್ ಅಭಾವ ಸೃಷ್ಟಿಯಾಗಿ 7ಕ್ಕೂ ಹೆಚ್ಚು ಬಂಕ್‌ಗಳನ್ನು ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
ತೈಲ ಕೊರತೆ ವದಂತಿ ಹಿನ್ನೆಲೆ ಜನ ಮುಗಿಬಿದ್ದು ಪೆಟ್ರೋಲ್-ಡೀಸೆಲ್ ಖರೀದಿಸಿದ್ದು, ಬೀದರ್ ನಗರದ ಬಸವೇಶ್ವರ ವೃತದ ಬಳಿ ಇರುವ ನಯಾರಾ ಪೆಟ್ರೋಲ್ ಬಂಕ್ ಸೇರಿದಂತೆ 7ಕ್ಕೂ ಅಧಿಕ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾಗಿ ಬಂಕ್‌ಗಳನ್ನು ಬಂದ್ ಮಾಡಲಾಗಿದೆ.
ಬುಧವಾರ ರಾತ್ರಿಯಿಂದಲೇ ಪೆಟ್ರೋಲ್, ಡಿಸೇಲ್ ಖಾಲಿಯಾಗಿದ್ದು, ಸ್ಟಾಕ್ ಇಲ್ಲದೇ ಜನರು ಪೆಟ್ರೋಲ್ ಬಂಕ್‌ಗೆ ಬಂದು ಹಿಡಿಶಾಪ ಹಾಕುತ್ತಾ ವಾಪಸ್ ಹೋಗುತ್ತಿದ್ದಾರೆ.
ಮಂಗಳೂರಿನಿಂದ ಬರುವ ಪೆಟ್ರೋಲ್ ಮತ್ತು ಡಿಸೇಲ್ ಗಾಡಿ ಬಂದಿಲ್ಲಾ. ಹೀಗಾಗಿ ಬೀದರ್‌ನ ನಮ್ಮ ಬಂಕ್‌ನಲ್ಲಿ ಪೆಟ್ರೋಲ್, ಡಿಸೇಲ್ ಖಾಲಿಯಾಗಿದೆ. ಗಾಡಿ ಬಂದ ತಕ್ಷಣ ನಾವು ಪೆಟ್ರೋಲ್, ಡಿಸೇಲ್ ನೀಡುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರು ತಿಳಿಸಿದ್ದಾರೆ.
ಇದನ್ನೂ ಓದಿ : ಬಸ್ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರು – ಭಜರಂಗದಳ ಆಕ್ರೋಶ!


















