ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದ ವತಿಯಿಂದ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಎನ್.ಪಿ.ಎಸ್ ಮತ್ತು ಯು.ಪಿ.ಎಸ್ ಯೋಜನೆಯನ್ನು ವಿರೋಧಿಸಿ ಹಳೇ ಪಿಂಚಣಿ ಯೋಜನೆಗೆ ಜಾರಿಗೆ ಆಗ್ರಹಿಸಿ ಎನ್ ಪಿಎಸ್ ನೌಕರರ ಸಂಘದ ಬೈಂದೂರು ಘಟಕದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಮನವಿ ಅರ್ಪಿಸಲಾಯಿತು. ತಹಸೀಲ್ದಾರ್ ಪ್ರದೀಪ್ ಮೂಲಕ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಸರ್ಕಾರವು ಈಗ ಜಾರಿಯಲ್ಲಿರುವ ಪಿಂಚಣಿ ಪದ್ಧತಿ ಕೈ ಬಿಟ್ಟು, ಹಳೆ ಯೋಜನೆಯನ್ನು ಮರು ಜಾರಿ ಮಾಡಬೇಕೆಂದು ಆಗ್ರಹಿಸಿ ಮನವಿ ಮೂಲಕ ಕೋರಲಾಯಿತು. ಈ ವೇಳೆ ಎನ್.ಪಿ.ಎಸ್ ನೌಕರರ ಸಂಘದ ತಾಲೂಕ ಅಧ್ಯಕ್ಷ ಸುಬ್ರಹ್ಮಣ್ಯ ಜಿ, ಕಾರ್ಯದರ್ಶಿ ಉದಯ್ ಕುಮಾರ್ ಎಂ.ಪಿ, ಖಜಾಂಚಿ ರಾಜೇಶ್, ಲೋಕೇಶ್, ಶಶಿಕಲಾ, ಗೋವಿಂದ ಎಂ, ಶ್ರೀದೇವಿ, ಮಂಗಲ್ ಜ್ಯೋತಿ, ರುಕ್ಕನ ಗೌಡ, ಆನಂದ ಪೂಜಾರಿ, ಸತೀಶ್ ತೋಳಾರ್, ಕಂದಾಯ ಇಲಾಖೆಯ ವೀರೇಶ್, ಗಣೇಶ್ ಮೇಸ್ತ, ಆರೋಗ್ಯ ಇಲಾಖೆಯ ಡಾ. ರಾಜೇಶ್, ಸಂತೋಷ್, ಗೋಪಾಲಕೃಷ್ಣ ಆಚಾರಿ, ಮೆಸ್ಕಾಂ ಇಲಾಖೆಯ ವಸಂತ್, ಪೌರಾಡಳಿತ ಇಲಾಖೆಯ ಭಾಸ್ಕರ್, ವಿಶ್ವನಾಥ್ ಪೂಜಾರಿ, ಮನೋಹರ್, ಶಿಕ್ಷಕರ ಸಂಘದ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ನಾಗರತ್ನ ಸೇರಿದಂತೆ ಹಲವರು ಇದ್ದರು.
