ದಾವಣಗೆರೆ: ಇಲ್ಲಿನ ಬಿ.ಎಸ್. ಚನ್ನಬಸಪ್ಪ ಮತ್ತು ಸನ್ಸ್ ನಲ್ಲಿ ಡಬಲ್ ಡಿಸ್ಕೌಂಟ್ ಆಫರ್ ಘೋಷಿಸಿರುವ ಹಿನ್ನೆಲೆಯಲ್ಲಿ ಬಟ್ಟೆ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ.
ಹಳೆ ದಾವಣಗೆರೆಯ ಕಾಳಿಕಾ ರಸ್ತೆಯಲ್ಲಿರುವ ಬಟ್ಟೆ ಅಂಗಡಿಗೆ ಜನ ಜಂಗುಳಿಯೇ ಉಂಟಾಗಿದೆ. ಯುಗಾದಿ ಹಾಗೂ ರಂಜನ್ ಹಬ್ಬದ ಹಿನ್ನೆಲೆಯಲ್ಲಿ ಬಟ್ಟೆ ಖರೀದಿಸಲು ಜನರು ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಬಟ್ಟೆ ಅಂಗಡಿ ಒಳಗೆ, ಹೊರಗಡೆ ಜನ ಸಾಗರವೇ ಎನ್ನುವಂತಾಗಿದೆ. ಬಟ್ಟೆ ಅಂಗಡಿ ಮುಂಭಾಗ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ.
ಕಳೆದ ಒಂದು ತಿಂಗಳಿನಿಂದ ಬಟ್ಟೆ ಅಂಗಡಿ ಮುಂದೆ ಫುಲ್ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಜಾತ್ರೆಯಂತೆ ಬಂದು ಜನ ಬಟ್ಟೆ ಖರೀದಿಸಿ ಹೋಗುತ್ತಿದ್ದಾರೆ. ಈ ರಸ್ತೆಯಲ್ಲಿ ಓಡಾಡಲು ಜನರು ಪರದಾಟ ನಡೆಸುವಂತಾಗಿದೆ.