ಹಾಸನ ಲೋಕಭಾ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ತೀವ್ರ ಕುತೂಹಲ ಮೂಡಿಸಿರುವ ಕ್ಷೇತ್ರದಲ್ಲಿ ಹಾವು -ಏಣಿ ಆಟ ಶುರುವಾಗಿದೆ.
ಅತ್ಯಾಚಾರ ಆರೋಪದಡಿ ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ, ಎಂಟನೇ ಸುತ್ತಿನ ಮತ ಎಣಿಕೆ ನಂತರ ಅಲ್ಪ ಅಂತರದಲ್ಲಿ ಮುಂದಿದ್ದಾರೆ. ಕೇವಲ 1,992 ಮತಗಳಿಂದ ಪ್ರಜ್ವಲ್ ಮುನ್ನಡೆ ಪಡೆದಿದ್ದಾರೆ. ಕಳೆದ ಎರಡು ಸುತ್ತುಗಳಲ್ಲಿ ಪ್ರಜ್ವರ್ ನನ್ನು ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣಗೆ ಫಲಿತಾಂಶ ನೋಡುವ ಅವಕಾಶ ಇಲ್ಲದಂತಾಗಿದೆ. ತನ್ನ ರಿಸಲ್ಟ್ ತಾನೇ ನೋಡಲಾಗದ ಸ್ಥಿತಿಯಲ್ಲಿರುವ ಪ್ರಜ್ವಲ್ ರೇವಣ್ಣ, ಮತ ಎಣಿಕೆ ನಡೆಯುತ್ತಿರುವುದನ್ನು ನೋಡಲು ಆಗದೆ ಪಶ್ಚಾತಾಪ ಪಡುತ್ತಿದ್ದಾನೆ.
ಟಿವಿ ಇಲ್ಲದೆ ಸೆಲ್ನಲ್ಲಿ ಪ್ರಜ್ವಲ್ ರೇವಣ್ಣ ಸೈಲೆಂಟ್ ಆಗಿ ಕುಳಿತಿದ್ದಾನೆ ಎನ್ನಲಾಗಿದೆ. ಹಾಸನದಲ್ಲಿ ಮತದಾನಕ್ಕೂ ಮುನ್ನ ನಾಲ್ಕು ದಿನಗಳ ಕಾಲ ಪೆನ್ ಡ್ರೈವ್ ಸದ್ದು ಮಾಡಿತ್ತು. ಆ ಬಳಿಕ ಮತದಾನ ನಡೆದಿತ್ತು. ಪೆನ್ಡ್ರೈವ್ ಫಲಿತಾಂಶ ಏನಾಗಲಿದೆ ಎಂಬುವುದು ಈಗ ಕುತೂಹಲ ಮೂಡಿಸಿದೆ.