ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಜಿಲ್ಲೆಯ, ಬೈಂದೂರು ವಲಯದವರಿಂದ “ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ” ಹಮ್ಮಿಕೊಂಡು ಯಶಸ್ವಿಯಾಯಿತು. ಗುಜ್ಜಾಡಿಯ ‘ಎಂ ಭಾಸ್ಕರ್ ಪೈ ಸರ್ಕಾರಿ ಪ್ರೌಢಶಾಲೆ’ಯಲ್ಲಿ ಈ ಶೈಕ್ಷಣಿಕ ಕಾರ್ಯಾಗಾರ ನಡೆದಿದ್ದು, ಸಭಾಧ್ಯಕ್ಷತೆಯನ್ನು ಸದಾನಂದ ಮೋವಾಡಿ ವಹಿಸಿದ್ದರು. ಈ ಕಾರ್ಯಾಗಾರ ವಿಶೇಷ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಆಜಾದ್ ಅಹ್ಮದ್ ಅವರನ್ನು ಸೇವೆ ಆಧರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಂಬದ ಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಶ್ರೀಯುತ ಪ್ರಕಾಶ್ ಚಂದ್ರ ಶೆಟ್ಟಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಎಸ್ ಡಿಎಂಸಿ ಸದಸ್ಯರಾಗಿರುವ ನಾಗರಾಜ್ ಮೋವಾಡಿ, ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿರುವ ರವಿಶಂಕರ್ ಹೆಗ್ಡೆ, ಯುವಜನ ಕ್ರೀಡಾಧಿಕಾರಿ ಪ್ರಭಾಕರ್ ಎಸ್ ಹಾಗೂ ಸಂಘದ ಗೌರವ ಅಧ್ಯಕ್ಷರಾದ ರಾಜು ಎಸ್ ಮಯ್ಯಾಡಿ ಉಪಸ್ಥಿತರಿದ್ದರು . ಸಂಪನ್ಮೂಲ ವ್ಯಕ್ತಿಗಳಾಗಿ ಆಜಾದ್ ಅಹಮದ್ ಹಾಗೂ ಶ್ರೀಯುತ ಮಂಜುನಾಥ್ ಶೆಟ್ಟಿ ಕಾರ್ಯನಿರ್ವಹಿಸಿದರು. ಸಂಘದ ಅಧ್ಯಕ್ಷರಾಗಿರುವ ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಗುರುರಾಜ್ ಪೂಜಾರಿ ವಂದಿಸಿದರು. ರಾಜೀವ ಶೆಟ್ಟಿ ನೀಡುಟ್ಟಿ ಕಾರ್ಯಕ್ರಮ ನಿರೂಪಿಸಿದರು.