ಬೆಂಗಳೂರು: ಆಂಧ್ರಪ್ರದೇಶದ ಡಿಸಿಎಂ, ನಟ ಪವನ್ ಕಲ್ಯಾಣ್ ನಟನೆಯ ಓಜಿ ಚಲನ ಚಿತ್ರ ಪ್ರದರ್ಶನ ವೇಳೆ ಸಿನಿಮಾ ನೋಡಲು ಬಂದ ಅಭಿಮಾನಿಗಳು ಹುಚ್ಚಾಟ ಮರೆದಿರುವ ಘಟನೆ ಮಡಿವಾಳದ ಸಂದ್ಯಾ ಟಾಕೀಸ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಗುಂಪು ಗುಂಪಾಗಿ ಬಂದು ಡ್ಯಾನ್ಸ್ ಮಾಡುತ್ತಿದ್ದ ವೇಳೆ ಎರಡು ಕತ್ತಿಗಳನ್ನು ಹಿಡಿದು ಓಜಿ ಓಜಿ ಎಂದು ಕತ್ತಿ ಪ್ರದರ್ಶನ ಮಾಡಿದ್ದಾರೆ.
ಅಭಿಮಾನಿಗಳ ಹುಚ್ಚಾಟವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಈ ವೇಳೆ ಸಾಕಷ್ಟು ಮಂದಿ ಜಮಾವಣೆಯಾಗಿದ್ದು, ಪೊಲೀಸರು ಬಂದು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದಾರೆ.