ಆನೇಕಲ್: ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಪವಿತ್ರಾ ಗೌಡ ಜಾಮೀನಿನ ಮೇಲೆ ಹೊರ ಬಂದಿದ್ದು, ಮುನೀಶ್ವರಸ್ವಾಮಿ ದರ್ಶನ ಪಡೆದಿದ್ದಾರೆ.
ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾಗೆ ಇತ್ತೀಚೆಗಷ್ಟೇ ಜಾಮೀನು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವರು ಸೆಂಟ್ರಲ್ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಆಚೆ ಬರುತ್ತಿದ್ದಂತೆ ಪವಿತ್ರಾ ತಮ್ಮ ತಾಯಿ ಮತ್ತು ಇತರ ಸಂಬಂಧಿಕರೊಂದಿಗೆ ಜೈಲಿನ ಅವರಣದಿಂದ ಹೊರ ಬಂದು, ನೇರವಾಗಿ ಮುನೀಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ.
ತಾಯಿಯ ಮನೆ ದೇವರಾಗಿರುವ ಮುನೀಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಪವಿತ್ರಾ ಅವರ ತಾಯಿ, ಮಗಳು ಸೇರಿದಂತೆ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.