ಚಿಕ್ಕಮಗಳೂರು: ಕೆಎಸ್ ಆರ್ ಟಿಸಿ ಬಸ್‌ನ ವ್ಯವಸ್ಥೆ ಕಂಡು ಪ್ರಯಾಣಿಕರು ಕಂಗಾಲಾಗಿದ್ದಾರೆ.
ಹೆಡ್‌ಲೈಟ್ ನಲ್ಲಿ ಬಲ್ಬ್, ವೈಫರ್ ಇಲ್ಲದೆ ಕೆಎಸ್ ಆರ್ ಟಿಸಿ ಬಸ್ ಸಂಚಾರದಿಂದ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿರುವ ಘಟನೆ ನಿನ್ನೆ(ಬುಧವಾರ) ತಡರಾತ್ರಿ ಬಾಣವರ ರಸ್ತೆ ಮಾರ್ಗದಲ್ಲಿ ನಡೆದಿದೆ.
ಚಿಕ್ಕಮಗಳೂರಿನಿಂದ ಬಾಣಾವರಕ್ಕೆ ಹೋಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹೆಡ್ ಲೈಟ್ ನಲ್ಲಿ ಬಲ್ಬ್ ಇಲ್ಲದೆ ರಾತ್ರಿ ಕಡೂರು ತಾಲೂಕಿನ ಹೋಚಿಹಳ್ಳಿ ಗೇಟ್ ಬಳಿ ಮಧ್ಯ ರಸ್ತೆಯಲ್ಲಿ ನಿಂತುಕೊಂಡ ಹಿನ್ನೆಲೆ ಪ್ರಯಾಣಿಕರನ್ನು ಚಾಲಕ ಮತ್ತು ನಿರ್ವಾಹಕ ಬೇರೆ ಬಸ್ ನಲ್ಲಿ ಕಳುಹಿಸಿದ್ದಾರೆ.
ರಸ್ತೆ ಮಧ್ಯೆ ಬಸ್ ಬದಲಾಯಿಸಿದರು ಪ್ರಯಾಣಿಕರಿಗೆ ಸಂಕಷ್ಟ ತಪ್ಪಲಿಲ್ಲ, 5-6 ಕಿ.ಮೀ. ಹೋಗುತ್ತಿದ್ದಂತೆ ಮತ್ತೊಂದು ಬಸ್ ಕೂಡ ಕೆಟ್ಟು ನಿಂತಿದೆ. ಆದ್ದರಿಂದ ಬಸ್ ನಲ್ಲಿದ್ದ ಮಹಿಳೆಯರು ಆತಂಕಗೊಂಡಿದ್ದಾರೆ. ಪ್ರಯಾಣಿಕರ ಸುರಕ್ಷತೆಗಾಗಿ ಡ್ರೈವರ್ ಮತ್ತು ಕಂಡಕ್ಟರ್ ರಾತ್ರಿ ತಾವೇ ಬಸ್ ಕೆಳಗೆ ಹೋಗಿ ರಿಪೇರಿ ಮಾಡಿದ್ದಾರೆ.
ಪ್ರತಿ ನಿತ್ಯ ಭಾಣವರಕ್ಕೆ ಬರುವ ಒಂದಲ್ಲ ಒಂದು ಕಡೆ ಕೆಟ್ಟು ನಿಲ್ಲುತ್ತಿರುವೆ. ಗ್ರಾಮೀಣ ಪ್ರದೇಶಕ್ಕೆ ನಿತ್ಯ ಗುಜರಿ ಬಸ್‌ಗಳನ್ನೆ ಕಳಿಹಿಸುತ್ತಾರೆ ಎಂದು ಚಿಕ್ಕಮಗಳೂರು ಕೆಎಸ್ ಆರ್ ಟಿಸಿ ಡಿಪೋ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



















