ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ(Wrestler Bajrang Punia) ಮತ್ತೆ ಅಮಾನತು ಆಗಿದ್ದಾರೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಕುಸ್ತಿಪಟು ಭಜರಂಗ್ ಪುನಿಯಾರನ್ನು ಅಮಾನತು ಮಾಡಿದೆ.
ಮಾರ್ಚ್ 10 ರಂದು ಸೋನಿಪತ್‌ನಲ್ಲಿ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು (Urine Sample) ನೀಡಿರಲಿಲ್ಲ. ಹೀಗಾಗಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ.

ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ನಿಗದಿತ ಸಮಯದೊಳಗೆ ನೀಡಿಲ್ಲ ಎಂದು ನಾಡಾ (National Anti Doping Agency)ಹೇಳಿದೆ. ಅಧಿಕಾರಿಗಳಿ ಮನವಿಯ ನಂತರವೂ ಮೂತ್ರದ ಮಾದರಿಗಳನ್ನು ನೀಡಲು ನೀರಕಾರಿಸಿದ್ದೀರಿ. ಮೂತ್ರ ಮಾದರಿ ಸಂಗ್ರಹಿಸಲು ಅವಧಿ ಮೀರಿದ ಕಿಟ್ ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಕ್ಕೆ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಈ ಕಾರಣಕ್ಕೆ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಡಾ ಹೇಳಿದೆ.
