ನೆಲಮಂಗಲ : 5 ವರ್ಷದ ಮಗುವನ್ನು ಪೋಷಕರು ವಾಕಿಂಗ್ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಹಾವು ಕಚ್ಚಿರುವ ಘಟನೆ ನೆಲಮಂಗಲದ ನಂದರಾಮಯ್ಯನಪಾಳ್ಯದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ.
5 ವರ್ಷ ರಕ್ಷಾಗೆ ಕೊಳಕು ಮಂಡಲ ಹಾವು ಕಡಿತದಿದೆ. ಈಕೆ ತಂದೆ ರವಿಕುಮಾರ್, ತಾಯಿ ಆಶಾ ದಂಪತಿಗಳ ಪುತ್ರಿಯಾಗಿದ್ದು, ಸಂಜೆ ತಂದೆ ರವಿಕುಮಾರ್ ಜೊತೆ ರಕ್ಷಾ ವಾಕಿಂಗ್ ಮುಗಿಸಿ ಮನೆಗೆ ತೆರಳುವ ವೇಳೆ ಈ ಅವಘಡ ನಡೆದಿದೆ. ಈ ದೃಶ್ಯವು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮಗುವಿಗೆ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಮಗಳ ಜನನದ ಮೊದಲು ಯೋಧ ವೀರಮರಣ | ಪತ್ನಿಯ ಕಣ್ಣೀರ ವಿದಾಯ



















