ಬೆಂಗಳೂರು: ಮಕ್ಕಳಿಗೆ ಪೆಪ್ಪರ್ಮೆಂಟ್, ಚಾಕೊಲೇಟ್, Gems, Jellies ಕೊಡಿಸುವ ಮುನ್ನ ಪಾಲಕರು ಎಚ್ಚರಿಕೆ ವಹಿಸಹಬೇಕಿದೆ.
ಕ್ಯಾನ್ಸರ್ ಸಹಿತ ಅಪಾಯಕಾರಿ ಕಾಯಿಲೆಗಳಿಗೆ ಚಾಕೊಲೇಟ್ ಹಾಗೂ ಜಮ್ಸ್ ಕಾರಣವಾಗುತ್ತಿವೆ ಎಂಬ ಕಾರಣಕ್ಕೆ ಆಹಾರ ಇಲಾಖೆ ಈ ಆಹಾರ ಪದಾರ್ಥಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಆಹಾರ ಇಲಾಖೆ ಪೆಪ್ಪರ್ ಮೆಂಟ್, ಚಾಕೊಲೇಟ್, ಜೇಮ್ಸ್ , ಜೆಲ್ಲಿಸ್ ಗಳ ಸ್ಯಾಂಪಲ್ಸ್ ಪಡೆಯಲು ಮುಂದಾಗಿದೆ. ಇವುಗಳಲ್ಲಿ ಕೃತಕ ಕಲರ್ ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ವಿದೇಶದಿಂದ ಆಮದು ಆಗುವ ಪದಾರ್ಥಗಳನ್ನು ಟೆಸ್ಟ್ ಮಾಡಲು ಆಹಾರ ಇಲಾಖೆ ಮುಂದಾಗಿದೆ. ಈ ವಿಷಯವಾಗಿ ಕೇಂದ್ರ FSSAI ಸೂಚನೆ ನೀಡಿದ್ದು, ಆಹಾರ ಇಲಾಖೆ ಅಲರ್ಟ್ ಆಗಿದೆ.



















