ಬೆಂಗಳೂರು : ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಒಂದು. ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳೂ ಬಾಕಿ ಉಳಿದಿವೆ. ನಗರದ ವಿವಿದೆಡೆ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ.
ಪಿಒಪಿ ಗಣೇಶಗಳನ್ನು ಬಳಸಬೇಡಿ, ಪರಿಸರ ಸ್ನೇಹಿ ಗಣೇಶನನ್ನೇ ಬಳಸಿ ಎಂದು ಪರಿಸರ ಪ್ರೇಮಿಗಳು ಮನವಿ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಮಾರುಕಟ್ಟೆಗೆ ಪೇಪರ್ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಪ್ರವೇಶ ನೀಡಿವೆ.
ಹೌದು, ಪೇಪರ್ ಮತ್ತು ಮರಗೆಣಸಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಈ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ ಮತ್ತು ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಬೆಂಗಳೂರಿನಲ್ಲಿ ಇವುಗಳ ತಯಾರಿಕೆ ಜೋರಾಗಿದೆ.
ಪರಿಸರ ಸಂರಕ್ಷಣೆಯಲ್ಲಿ ಇವು ಮುಖ್ಯ ಪಾತ್ರ ವಹಿಸುತ್ತವೆ. ಪೇಪರ್ ಗಣಪತಿ ವ್ಯಾಪಾರ ಕಂಡು ಪರಿಸರ ಪ್ರೇಮಿಗಳು ಸಂತಸ ಪಡುತ್ತಿದ್ದು, ಈ ಬಾರಿಯಾದರೂ ಪರಿಸರಕ್ಕೆ ಧಕ್ಕೆ ಮಾಡುವ ಪಿಒಪಿ ಗಣಪತಿ ನಿಷೇಧ ಮಾಡುವಂತೆ ಸರ್ಕಾರಕ್ಕೆ ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.


















