ಪಾನಿಪುರಿ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೆಲವರು ರೋಡ್ ಸೈಡಲ್ಲಿ ಸಿಗೋ ಪಾನಿಪೂರಿ ತಿಂದರೆ ಇನ್ನು ಕೆಲವರು ದೊಡ್ಡದೊಡ್ಡ ಹೋಟೇಲ್ ಗಳನ್ನು ಪ್ರಿಫರ್ ಮಾಡುತ್ತಾರೆ. ಇನ್ನು ಹೈ ಫೈ ಹೋಟೇಲ್ ಗಳಲ್ಲಂತೂ ರುಚಿ ಹೇಗಿರುತ್ತೋ ಏನೋ? ಆದರೆ, ಬೆಲೆ ಮಾತ್ರ ದುಪ್ಪಟ್ಟು ಇರುತ್ತೆ. ಜೊತೆಗೆ ಅವರು ಹೇಗೆ ತಯಾರಿಸ್ತಾರೆ. ಹೈಜಿನ್ ಇರುತ್ತಾ? ಇಲ್ವಾ ಅಂತಾ ನೋಡೋದೇ ಸರ್ವ್ ಮಾಡಿದ ತಕ್ಷಣ ಬಾಯಿ ಚಪ್ಪರಿಸಿಕೊಂಡು ತಿಂತೀವಿ.
ಆದರೆ, ಇಲ್ಲೊಂದು ಕಡೆ ಜಿರಳೆ ಪಾನಿಪೂರಿ ನೋಡಿದರೆ ನಿಜಕ್ಕೂ ಶಾಕ್ ಆಗ್ತೀರಾ. ಹೌದು! ಉತ್ತರ ಪ್ರದೇಶದ ಗಾಜಿಯಾಬಾದ್ ನ ರಾಜ್ ನಗರ್ಬಳಿಯಿರುವ ಕಲೇವಾ ರೆಸ್ಟೋರೆಂಟ್ ನಲ್ಲಿನ ಕಳಪೆ ಮಟ್ಟದ ಶುಚಿತ್ವ ಹಾಗೂ ಪಾನಿಪುರಿಗಳ ಮೇಲೆ ಜಿರಳೆಗಳು ಓಡಾಡುತ್ತಿದ್ದು, ನೋಡಿದರೆ ವಾಕರಿಕೆ ತರಿಸುವಂತಿದೆ. ಈ ವಿಡಿಯೋವೊಂದು ಗ್ರಾಹಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಪಾನಿಪುರಿಯ ಮೇಲೆ ಜಿರಳೆಗಳು ಓಡಾಡುತ್ತಿರುವುದನ್ನು ಕಾಣಬಹುದು.
ಈ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿರುವ ಗ್ರಾಹಕನು ಹೋಟೆಲಿನ ಸಿಬ್ಬಂದಿಗೆ ಪಾನಿಪುರಿ ಮೇಲೆ ಜಿರಳೆಗಳು ಓಡಾಡುತ್ತಿರುವುದನ್ನು ನೋಡಿದ್ದಾನೆ. ಆ ಕೂಡಲೇ ಹೋಟೆಲ್ ಮಾಲೀಕರನ್ನು ಕರೆಯುವಂತೆ ಸಿಬ್ಬಂದಿಗೆ ಹೇಳಿರುವುದನ್ನು ಕಾಣಬಹುದು. ನೆಟ್ಟಿಗರಂತೂ ಈ ವಿಡಿಯೋಗೆ ಇದರ ಬದಲು ರೋಡ್ಸೈಡ್ ಸಿಗುವ ಪಾನಿಪೂರಿ ಎಷ್ಟೋ ಉತ್ತಮ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.