ಬೆಳಗಾವಿ : 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಹೋರಾಟಗಾರರ ಬೆನ್ನಿಗೆ ನಿಂತಿದ್ದ ಯತ್ನಾಳ್ ಈಗ ಮೌನ ವಹಿಸಿದ್ದಾರೆ ಎನ್ನಲಾಗಿದೆ. ಕಾರಣ ಹೋರಾಟಕ್ಕೆ ವಿಜಯೇಂದ್ರ ಬೆಂಬಲ ಸೂಚಿಸಿದ್ದಕ್ಕೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಲಾಠಿ ಚಾರ್ಜ್ ನಡೆದ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಹೋರಾಟದ ಭಾಗವಾಗಿದ್ದರು. ಆದರೆ, ಆನಂತರ ಹೋರಾಟಗಾರರಿಗೆ ವಿಜಯೇಂದ್ರ ಬೆಂಬಲ ಸೂಚಿಸುತ್ತಿದ್ದಂತೆ ಯತ್ನಾಳ್ ಮೌನ ವಹಿಸಿದ್ದಾರೆ. ಎಲ್ಲಿಯೂ ಲಾಠಿ ಚಾರ್ಜ್ ಬಗ್ಗೆ ಮಾತನಾಡಿಲ್ಲ. ಈ ಹೋರಾಟದಿಂದ ವಿಜಯೇಂದ್ರಗೆ ಲಾಭವಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಯೂ ಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ.
ಇದು ಕೆಲವು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಪಂಚಮಸಾಲಿ ಹೋರಾಟಕ್ಕೆ ಶಕ್ತಿ ತುಂಬಿದ್ದು, ಯತ್ನಾಳ್. ಅಲ್ಲದೇ, ಅವರು ಅದೇ ಸಮಾಜದವರು. ಹೀಗಾಗಿ ಅವರು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಈಗಾಗಲೇ ಹಲವರು ಪಟ್ಟು ಹಿಡಿದಿದ್ದಾರೆ. ಅವರಿಲ್ಲದೆ, ಹೋರಾಟ ಬೇಡ ಎಂದು ಕೂಡ ಹಲವರು ಹೇಳುತ್ತಿದ್ದಾರೆ.
ಹೀಗಾಗಿಯೇ ವಿಧಾನಸೌಧದಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ಹರಿಹಾಯುತ್ತಿದೆ. ವಕ್ಫ್ ವಿಚಾರದ ವಾಕ್ಸಮರದಲ್ಲಿ ರೈತರು, ಹಿಂದೂಗಳ ಆಸ್ತಿ ಕಸಿದುಕೊಳ್ಳಲು ಸರಕಾರವೇ ಕುಮ್ಮಕ್ಕು ನೀಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು. ಈ ವೇಳೆ ಕಾಂಗ್ರೆಸ್ ನಿಮ್ಮ ಆಂತರಿಕ ಕಲಹ, ರಾಜಕೀಯ ಉದ್ದೇಶಕ್ಕೆ ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸಬೇಡಿ ಎಂದು ಆಡಳಿತಾರೂಢ ಕಾಂಗ್ರೆಸ್ ತಿರುಗೇಟು ನೀಡಿದೆ.