ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ವಿಚಾರವಾಗಿ ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ವಿಧಾನಪರಿಷತ್ ನಲ್ಲೂ ಪಟ್ಟು ಹಿಡಿಯಲಾಗಿತ್ತು.
ಗೃಹ ಸಚಿವ ಪರಮೇಶ್ವರ್, ಲಾಠಿಚಾರ್ಜ್ ಮಾಡಿದ್ದನ್ನು ಸರ್ಮಥಿಸಿಕೊಂಡರು. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಂದವರನ್ನು ಬಿಟ್ಟು ಬಿಡಬೇಕಿತ್ತಾ ಎಂದು ಕಿಡಿಕಾರಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಸಿಎಂ. ಹೋರಾಟ ಮಾಡುವುದು ತಪ್ಪಲ್ಲ. ಹಿಂದೆ ಮುರುಗೇಶ್ ನಿರಾಣಿಯವರನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ.
ಹೀಗಾಗಿ ಮೀಸಲಾತಿ ಹೆಸರಲ್ಲಿ ಹೋರಾಟ ಆರಂಭ ಮಾಡಿದ್ದರು ಎಂದರು. ಈ ವಿಷಯವಾಗಿ ಮತ್ತೆ ಕೋಲಾಹಲ ಆರಂಭವಾಯಿತು.
ವಿಧಾನಸಭೆಯಲ್ಲೂ ಪಂಚಮಸಾಲಿ ಹೋರಾಟದ ವಿಚಾರವಾಗಿ ಮಾತನಾಡಿದ ಶಾಸಕ ವಿಜಯಾನಂದ್ ಕಾಶಪ್ಪನವರ್, ಇದು ಬಿಜೆಪಿ ಪ್ರಾಯೋಜಿತ ಹೋರಾಟ, ಗಲಾಟೆಯಲ್ಲಿ ಕಲ್ಲು ತೂರಿದವರು ಆರೆಸ್ಸೆಸ್ ನವರು ಎಂದು ಆರೋಪಿಸಿದರು. ಇದಕ್ಕೆ ಗಲಾಟೆ ಆರಂಭವಾಯಿತು.