ಧಾರವಾಡ : ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ಮಹಾತಪಸ್ವಿ ಕರ್ತೃ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಏಪ್ರಿಲ್-2ರಂದು ಜರುಗಲಿದ್ದು, ಇದರ ಅಂಗವಾಗಿ ಮಾರ್ಚ್-21 ರಿಂದ ಕಲಬುರ್ಗಿ ಶ್ರೀಶರಣಬಸವೇಶ್ವರ ಪುರಾಣ ಪ್ರವಚನ ನಡೆಯಲಿದೆ.
ಶುಕ್ರವಾರ ಸಂಜೆ 6-30ಕ್ಕೆ ಹಾವೇರಿ ಜಿಲ್ಲೆ ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಪುರಾಣ ಪ್ರವಚನ ಉದ್ಘಾಟಿಸುವರು. ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಉಪದೇಶಾಮೃತ ನೀಡುವರು. ಗದಗ ಜಿಲ್ಲೆ ಡೋಣಿ ಗ್ರಾಮದ ಶಶಿಧರ ಶಾಸ್ತ್ರೀಜಿ ಪುರಾಣ ಪ್ರವಚನ ನೀಡುವರು. ಗದಗ ವೀರೇಶ್ವರ ಪುಣ್ಯಾಶ್ರಮದ ವೀರೇಶಕುಮಾರ ಮಳಲಿ ಅವರ ಸಂಗೀತಕ್ಕೆ ಸಿದ್ಧರಾಮ ಬ್ಯಾಕೋಡ ಸಿಂದಗಿ ತಬಲಾ ಸಾಥ ನೀಡುವರು.
ಧರ್ಮ ಚಿಂತನ ಸಮಾವೇಶ : ಏಪ್ರೀಲ್-1 ರಂದು ಸಂಜೆ 6-30 ಗಂಟೆಗೆ ನಡೆಯುವ ಜನಜಾಗೃತಿ ಧರ್ಮ ಚಿಂತನ ಸಮಾವೇಶವನ್ನು ತಿಪಟೂರು ತಾಲೂಕು ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ಧೇಶ್ವರಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸುವರು. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ವಿಜಯನಗರ ಜಿಲ್ಲೆ ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಲಬುರ್ಗಿ ಜಿಲ್ಲೆ ಬೆಳಗುಂಪಾದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿಯ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಸತ್ತಿಗೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹಾಸನ ಜಿಲ್ಲೆ ಹೆಗಡಳ್ಳಿಯ ಷಡ್ಭಾವ ರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಘಟಗಿಯ ಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮೀಜಿ, ಹುಣಸಿಕಟ್ಟಿಯ ಬಸವರಾಜ ದೇವರು, ಬ್ಯಾಹಟ್ಟಿಯ ಡಾ. ಸತೀಶ ಗುರೂಜಿ ಪಾಲ್ಗೊಳ್ಳುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಶಾಸಕರುಗಳಾದ ಅಮೃತ ದೇಸಾಯಿ, ಸೀಮಾ ಮಸೂತಿ, ಧಾಮುಲ್ ನಿರ್ದೇಶಕಿ ಶಿವಲೀಲಾ ಕುಲಕರ್ಣಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ವಿವಿಧ ರಾಕೀಯ ಪಕ್ಷಗಳ ಮುಖಂಡರುಗಳಾದ ತವನಪ್ಪ ಅಷ್ಟಗಿ, ಗುರುರಾಜ ಹುಣಸೀಮಠದ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಮಂಜುನಾಥ ಮಕ್ಕಳಗೇರಿ, ಅಮ್ಮಿನಬಾವಿ ಗ್ರಾ.ಪಂ. ಅಧ್ಯಕ್ಷೆ ನೀಲವ್ವ ತಿದಿ, ಉಪಾಧ್ಯಕ್ಷ ವಿಠ್ಠಲ ಭೋವಿ ಭಾಗವಹಿಸುವರು. ಡಾ. ನಿತಿನ್‌ಚಂದ್ರ ಹತ್ತಿಕಾಳ, ಸಂಗಯ್ಯ ಹಿರೇಮಠ, ಬಸವರಾಜ ಕಲ್ಯಾಣಪೂರ, ಎಸ್.ಆರ್. ಶಿವಯ್ಯನಮಠ, ಪದ್ಮಾವತಿ ತವನಪ್ಪ ದೇಸಾಯಿ, ಶಕ್ತಿ ಹಿರೇಮಠ ಅವರನ್ನು ಗೌರವಿಸಲಾಗುವುದು.
ಗುಗ್ಗಳ ಮಹೋತ್ಸವ : ಜಾತ್ರೆಯ ಅಂಗವಾಗಿ ಏಪ್ರೀಲ್-1 ರಂದು ಪ್ರಾತಃಕಾಲದಲ್ಲಿ ಶ್ರೀವೀರಭದ್ರ ದೇವರ ಸಾಮೂಹಿಕ ಗುಗ್ಗಳ ಮಹೋತ್ಸವ ಆಯೋಜನೆಯಾಗಿದೆ. ಇದೇ ದಿನ ಅಪರಾಹ್ನ 1 ಗಂಟೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಪಾದಪೂಜೆ ಜರುಗಲಿದೆ. ನಿತ್ಯದ ಕಾರ್ಯಕ್ರಮಗಳಲ್ಲಿ ಅಮ್ಮಿನಬಾವಿ ಸಂಸ್ಥಾನ ಪಂಚಗ್ರಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡುವರು.
ರಥೋತ್ಸವ : ಏಪ್ರೀಲ್-2ರಂದು ಬುಧವಾರ ಸಾಯಂಕಾಲ 5 ಗಂಟೆಗೆ ಅಮ್ಮಿನಬಾವಿಯ ಸಂಸ್ಥಾನ ಪಂಚಗೃಹ ಹಿರೇಮಠದ ಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ನಡೆಯಲಿದ್ದು, ನಾಡಿನ ಹಲವಾರು ಮಠಾಧೀಶರು ಪಾಲ್ಗೊಳ್ಳುವರು. ಏಪ್ರೀಲ್-2ರಂದು ಪ್ರಾತಃಕಾಲದಲ್ಲಿ ವೀರಶೈವ ಜಂಗಮ ವಟುಗಳಿಗೆ ಅಯ್ಯಾಚಾರದ ದೀಕ್ಷಾ ಕಾರ್ಯಕ್ರಮವಿದ್ದು, ಏಪ್ರೀಲ್-3 ರಂದು ಮುಂಜಾನೆ 10 ಗಂಟೆಗೆ ಕಡುಬಿನ ಕಾಳಗ ನಡೆಯಲಿದೆ. ನಿತ್ಯ ಸಂಜೆ 6 ಗಂಟೆಗೆ ಅಮ್ಮಿನಬಾವಿ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಶಿವಾನಂದ ಹಿರೇಮಠ, ಸೋಮಲಿಂಗಶಾಸ್ತ್ರಿ ಹಿರೇಮಠ, ವಿನಾಯಕ ಹಿರೇಮಠ, ಶಿವಯೋಗಿ ಹಿರೇಮಠ, ಈರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಈ ಜಾತ್ರಾ ಮಹೋತ್ಸವದ ಎಲ್ಲಾ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ ಎಂದು ಜಾತ್ರಾ ಮಹೋತ್ಸವ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.