ಬೆಂಗಳೂರು : ಪ್ಯಾನ್ ಕಾರ್ಡ್ ದೇಶದ ನಾಗರಿಕರ ಪ್ರಮುಖ ಗುರುತಿನ ಚೀಟಿಯಾಗಿದೆ. ಅದರಲ್ಲೂ, ಪ್ರತಿಯೊಬ್ಬರ ಆರ್ಥಿಕ ಚಟುವಟಿಕೆಗಳ ಮೇಲೆ ಇರಿಸುವ, ಬ್ಯಾಂಕ್ ವ್ಯವಹಾರಗಳಿಗೆ ಬೇಕಾಗುವ ಪ್ರಮುಖ ಐಡಿ ಆಗಿದೆ. ಅಷ್ಟೇ ಅಲ್ಲ, ತೆರಿಗೆ ಪಾವತಿ, ಬ್ಯಾಂಕ್ ಖಾತೆ ತೆರೆಯುವುದು ಸೇರಿ ಹತ್ತಾರು ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಬೇಕೇ ಬೇಕು. ನೀವೊಂದು ಕಂಪನಿ ಸೇರಬೇಕು ಎಂದರೂ ಇದರ ಅವಶ್ಯಕತೆ ಇರುತ್ತದೆ.
ಇಂತಹ ಪ್ಯಾನ್ ಕಾರ್ಡ್ನಲ್ಲಿ ಹೆಸರು ತಪ್ಪಾಗಿದ್ದರೆ, ವಿಳಾಸ ಸೇರಿ ಯಾವುದೇ ಮಾಹಿತಿಯನ್ನು ಬದಲಾವಣೆ ಮಾಡಬೇಕು ಎಂದರೆ ಈಗ ಸೈಬರ್ ಸೆಂಟರ್ಗಳಿಗೆ ಅಲೆಯಬೇಕಾಗಿಲ್ಲ. ಬೆರಳ ತುದಿಯಲ್ಲಿಯೇ, ಅಂದರೆ ಮನೆಯಲ್ಲೇ ಕುಳಿತು ಕಂಪ್ಯೂಟರ್ ನಲ್ಲಿ ಪ್ಯಾನ್ ಕಾರ್ಡ್ ತಿದ್ದುಪಡಿ ಮಾಡಬಹುದಾಗಿದೆ.
ಆನ್ಲೈನ್ ಮೂಲಕ ತಿದ್ದುಪಡಿ ಮಾಡುವುದು ಹೇಗೆ?
ಮೊದಲಿಗೆ Protean (NSDL) ವೆಬ್ ಪೋರ್ಟಲ್ ಆಗಿರುವ https://onlineservices.proteantech.in/paam/endUserRegisterContact.html ಅಥವಾ UTIITSL ಪೋರ್ಟಲ್ ಗೆ ಭೇಟಿ ನೀಡಿ. Application Type ನಲ್ಲಿ Changes or Correction in existing PAN data ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಹೆಸರು, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ. ನೀವು ಯಾವ ಮಾಹಿತಿಯನ್ನು ತಿದ್ದಬೇಕಿದೆಯೋ (ಉದಾ: ಹೆಸರು), ಆ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ಸರಿಯಾದ ವಿವರ ನೀಡಿ. ಗುರುತಿನ ಚೀಟಿ, ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ಪುರಾವೆಯಾಗಿ ಆಧಾರ್ ಕಾರ್ಡ್ ಬಳಸಬಹುದು. ನಿಮ್ಮ ಮನೆಯ ವಿಳಾಸಕ್ಕೆ ಹೊಸ ಕಾರ್ಡ್ ಬೇಕಾದಲ್ಲಿ ಸುಮಾರು 101-110 ರೂ. ಶುಲ್ಕ ಪಾವತಿಸಬೇಕು. ಇ-ಕೆವೈಸಿ (e-KYC) ಮೂಲಕ ಆಧಾರ್ ಒಟಿಪಿ ಬಳಸಿ ಡಿಜಿಟಲ್ ಸಹಿ ಮಾಡಬಹುದು. ಅಪ್ಲಿಕೇಶನ್ ಸಲ್ಲಿಸಿದ ನಂತರ ನಿಮಗೆ 15 ಅಂಕಿಯ ಸ್ವೀಕೃತಿ ಸಂಖ್ಯೆ (Acknowledgement Number) ದೊರೆಯುತ್ತದೆ. ಇದರ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಯಾವ ದಾಖಲೆ ಬೇಕು?
ಆಧಾರ್ ಕಾರ್ಡ್ (ಹೆಸರು ಮತ್ತು ವಿಳಾಸಕ್ಕಾಗಿ ಉತ್ತಮ ಪುರಾವೆ)
ಹಳೆಯ ಪ್ಯಾನ್ ಕಾರ್ಡ್ನ ನಕಲು ಪ್ರತಿ.
ಮದುವೆಯ ನಂತರ ಹೆಸರು ಬದಲಾಗಿದ್ದರೆ ಮದುವೆ ನೋಂದಣಿ ಪ್ರಮಾಣಪತ್ರ
ಇದನ್ನೂ ಓದಿ : 2027ರ ಏಕದಿನ ವಿಶ್ವಕಪ್ನಿಂದ ರೋಹಿತ್ ಶರ್ಮಾ ಔಟ್? ಖಾಸಗಿ ಸಂಭಾಷಣೆ ಬಹಿರಂಗಪಡಿಸಿದ ಯೂಟ್ಯೂಬರ್!



















