ಬೆಂಗಳೂರು: ದೂರದೃಷ್ಟಿ ಚಿಂತನೆ ಇದ್ದಾಗ, ಜಾತಿ, ಧರ್ಮ ಬರವುದಿಲ್ಲ. ಪಾಲನೇತ್ರ ಕನ್ನಡ ಪರ ಹೋರಾಟಗಾರ. ಪಾಲನೇತ್ರ ಸ್ವಾಭಿಮಾನಿ, ಕೃತಜ್ಞತೆ ಇರುವ ವ್ಯಕ್ತಿತ್ವ, ಕನ್ನಡ ಪರ ಹೋರಾಟದಲ್ಲಿ ಪಾಲನೇತ್ರನಿಗೆ ಪಾಲನೇತ್ರನೆ ಸಾಟಿ. ಗುರಿಯಿಟ್ಟು ಕೆಲಸ ಮಾಡಬೇಕು ಆಗ ಸಾಧನೆ ಮಾಡಲು ಸಾಧ್ಯ. ನಾಡು, ನುಡಿಯ ಅವಿರತ ಸೇವೆಯಿಂದ ಪಾಲನೇತ್ರರವರು ಕನ್ನಡದ ಕಟ್ಟಾಳುವಾಗಿದ್ದಾರೆ ಎಂದು ಕೇಂದ್ರ ಸಚಿವರಾದ ವಿ.ಸೋಮಣ್ಣ ಹೇಳಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ, ಕನ್ನಡಪರ ಚಿಂತಕ, ಹೋರಾಟಗಾರ ಸಾಾಮಾಜಿಕ, ಸಾಂಸ್ಕೃತಿಕ ಸಂಘಟಕ ಪಾಲನೇತ್ರರವರಿಗೆ ಅಭಿನಂದನೆ ಮತ್ತು ಕನ್ನಡ ಜಂಗಮ ಗ್ರಂಥ ಲೋಕಾರ್ಪಣಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ, ಸಾಮಾನ್ಯ ಕುಟುಂಬದಿಂದ ಬಂದ ಪಾಲನೇತ್ರರವರ ಕನ್ನಡಿಗನಾಗಿ, ತಾಯಿ ಭುವನೇಶ್ವರಿ ಆಶೀರ್ವಾದದಿಂದ ಕನ್ನಡ ಪರ ಕೆಲಸಗಳು ಮಾಡಿ ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆದಿದ್ದಾರೆ.
ರೈಲ್ವೆ ಇಲಾಖೆಯಲ್ಲಿ 12ಲಕ್ಷ ಉದ್ಯೋಗಿಗಳು ಇದ್ದಾರೆ ಕನ್ನಡಿಗರ ಸಂಖ್ಯೆ ಬಹಳ ವಿರಳ ನಾನು ಪಾಲನೇತ್ರರವರ ಜೊತೆಯಲ್ಲಿ ಚರ್ಚೆ ಮಾಡಿ ಪ್ರಧಾನಿ ನರೇಂದ್ರಮೋದಿರವರ ಜೊತೆಯಲ್ಲಿ ಚರ್ಚೆ ಮಾಡಿ ದೇಶದ 10ರಾಜ್ಯಗಳಲ್ಲಿ ರಾಜ್ಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು. ಇದ್ದರಿಂದ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಪರೀಕ್ಷೆ ಬರೆದು ನೇಮಕಾತಿ ಆಗುವಂತೆ ಆಯಿತು.
ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕೆಲಸ ಶಾಶ್ವತ. ದೇಶಕ್ಕೆ ಉತ್ತಮ ಭವಿಷ್ಯವಿದೆ. ಪಾಲನೇತ್ರರವರ ಮನವಿ ಮೇರೆಗೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಬಸವ ಜಯಂತಿ ಅಚರಣೆಯನ್ನು ನವದೆಹಲಿಯಲ್ಲಿ ಅಚರಿಸಲಾಯಿತು. ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡುವುದಕ್ಕೆ ಅವಕಾಶ ನೀಡಲಾಗಿದೆ ಹಾಗೂ ದೇಶದ ಎಲ್ಲ ಭಾಷೆಯಲ್ಲಿ ಮಾತನಾಡುವ ಉತ್ತರ ಕೊಡುವ ಅವಕಾಶ ನೀಡಲಾಗಿದೆ ನಾನು ಇದರ ಬಗ್ಗೆ ಪತ್ರ ಬರೆಯಲು ಪಾಲನೇತ್ರರವರ ಸಲಹೆ ಕಾರಣ ಎಂದು ತಿಳಿಸಿದ್ದಾರೆ.
ಇನ್ನೂ ಇದೇ ವೇಳೆ, ಸಿದ್ದಗಂಗಾ ಮಠದ ಸಿದ್ದಲಿಂಗಾ ಸ್ವಾಮಿಗಳು ಮಾತನಾಡಿ ಕನ್ನಡದ ಅಭಿಮಾನಿಗಳು ಗಟ್ಟಿಯಾಗಿ ನಿಲ್ಲುತ್ತಾರೆ. ಕುಗ್ರಾಮದಲ್ಲಿ ಹುಟ್ಚಿದ ಪಾಲನೇತ್ರರವರು ಬೆಂಗಳೂರಿಗೆ ಬಂದು ಕನ್ನಡ ಚಳುವಳಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ.
ಕುಮಾರವ್ಯಾಸ ಹೇಳುತ್ತಾರೆ ಮದುವೆ ಎಂಬುದು ಮುಖ್ಯವಲ್ಲ ಬಂಧು, ಬಳಗದವರು ಸೇರುತ್ತಾರೆ ಅದು ಮುಖ್ಯ. ನೀರು ಎಲ್ಲಿ ಹಾಕಿದರು ಒಂದೇ ಆಕಾರ ಅದರಂತೆ ಪಾಲನೇತ್ರರವರು. ಜಾತಿ ಮತ್ತು ರಾಜಕಾರಣದಿಂದ ದೂರವಿರುವ ಪಾಲನೇತ್ರ, ಕನ್ನಡವೇ ಜಾತಿ ಎಂದು ಬದುಕುತ್ತಿದ್ದಾರೆ. ಪಾಲನೇತ್ರ ಸಂಪತ್ತು ಗಳಿಸಲ್ಲಿಲ, ಬರಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅಭಿಮಾನ ಎಂದು ಹಳಿಸಿಹೋಗವುದಿಲ್ಲ, ಮಾಸಿಹೋಗುವುದಿಲ್ಲ ನಿಮ್ಮ ಅಭಿಮಾನ ಪಾಲನೇತ್ರನ ಮೇಲಿದೆ ಎಂದು ಹೇಳಿದ್ದಾರೆ.
ಸನ್ಮಾನ ಸ್ವಿಕರಿಸಿ ಮಾತನಾಡಿದ ಪಾಲನೇತ್ರ, 4ದಶಕಗಳ ಕಾಲ ಕನ್ನಡ ಪರ ಹೋರಾಟದಲ್ಲಿ ನನಗೆ ಸಹಕಾರಿ, ಬೆಂಬಲಿಸಿದ ಎಲ್ಲ ಕನ್ನಡ ಹೋರಾಟಗಾರರಿಗೆ ಋಣಿಯಾಗಿದ್ದೇನೆ. ಕನ್ನಡ ಪರ ಹೋರಾಟಗಾರರು ನನ್ನ ಸಂಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದಾರೆ. ಕನ್ನಡಿಗರು ಎಲ್ಲರು ಒಟ್ಟಾಗಿ ಸಂಘಟಿತರಾಗಿ ಉಳಿಯೋಣ ಎಂದು ಹೇಳಿದ್ದಾರೆ.
ಇದೇ ಸಂಧರ್ಭದಲ್ಲಿ ಕನ್ನಡ ಪರ ಸಾಧಕರಾದ ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಎ.ಅಮೃತ್ ರಾಜ್, ಡಾ.ತಲಕಾಡು ಚಿಕ್ಕರಂಗೇಗೌಡ, ಕೆ.ಮಂಜನಾಥದೇವ, ವ.ಚ.ಚನ್ನೇಗೌಡ, ನಾ.ಶ್ರೀಧರ್, ಗೋ.ಮೂರ್ತಿ ಯಾದವ್, ಜಿ.ಗುರುಪ್ರಸಾದ್, ಬಿ.ಆರ್.ಶಿವಕುಮಾರ್, ಎಂಜಿ.ವಿಜಯಲಕ್ಷ್ಮಿ ರವರಿಗೆ ಗೌರವಿಸಿ, ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇಗುಲಮಠದ ಡಾ.ಚನ್ನಬಸವ ಸ್ವಾಮೀಜಿಗಳು, ಪವಾಡ ಶ್ರೀ ಬಸವಣ್ಣ ದೇವರಮಠದ ಸಿದ್ದಲಿಂಗಾ ಸ್ವಾಮಿಗಳು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣರವರು ಮತ್ತು ಶ್ರೀ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀಮತಿ ಶೈಲಜ ಸೋಮಣ್ಣರವರು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, ಕನ್ನಡ ಪರ ಹೋರಾಟಗಾರ ಡಾ.ಬೈರಮಂಗಲ ರಾಮೇಗೌಡ, ಕನ್ನಡಪರ ಚಿಂತಕ, ಹೋರಾಟಗಾರ ಪಾಲನೇತ್ರರವರು, ಗುರುನಾಥ ಹೊಳ್ಳರು, ಅಭಿನಂದನಾ ಸಮಿತಿ ಅಧ್ಯಕ್ಷ ಶಿವರಾಮೇಗೌಡರವರು ಉಪಸ್ಥಿತರಿದ್ದರು.