ಪಾಕಿಸ್ತಾನ್ ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಸಾಧಿಸಿದೆ.
ಅದೂ 22 ವರ್ಷಗಳ ನಂತರ ಈ ಸಾಧನೆ ಮಾಡಿದೆ ಎಂಬುವುದು ವಿಶೇಷ. ಆಸ್ಟ್ರೇಲಿಯಾದಲ್ಲೇ 2-1 ರಿಂದ ಮಣಿಸಿ ಏಕದಿನ ಸರಣಿ ಗೆಲ್ಲುವ ಮೂಲಕ ಪಾಕ್ ಸಂಭ್ರಮಿಸಿದೆ.
ಮೊಹಮ್ಮದ್ ರಿಝ್ವಾನ್ ನೇತೃತ್ವದಲ್ಲಿ ಪಾಕ್ ತಂಡ ಈ ಸಾಧನೆ ಮಾಡಿದೆ. ಈ ಗೆಲುವಿನೊಂದಿಗೆ ಆಸೀಸ್ ಪಿಚ್ನಲ್ಲಿ ಸರಣಿ ಗೆಲ್ಲುವ ಪಾಕ್ ತಂಡದ 22 ವರ್ಷಗಳ ಬರ ನೀಗಿಸಿಕೊಂಡಿದೆ. ನಿರ್ಣಾಯಕ ಮೂರನೇ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪಾಕ್ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಕೇವಲ 140 ರನ್ ಗಳಿಗೆ ಸರ್ವಪತನ ಕಂಡಿತು.
141 ರನ್ ಗಳ ಗುರಿ ಬೆನ್ನಟ್ಟಿದ ಪಾಕ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಪಾಕ್ ನ ಮೊದಲ ವಿಕೆಟ್ ಜೊತೆಯಾಟದಿಂದ 84 ರನ್ ಗಳು ಬಂದಿದ್ದವು. ನಂತರ ಅಬ್ದುಲ್ಲಾ ಶಫೀಕ್ (37) ವಿಕೆಟ್ ಒಪ್ಪಿಸಿದರು. ಸೈಮ್ ಅಯ್ಯೂಬ್ (42) ರನ್ ಗಳಿಸಿದರು. ನಂತರ ಪಾಕ್ ತಂಡ 26.5 ಓವರ್ಗಳಲ್ಲಿ 143 ರನ್ ಗಳಿಸಿ ಗೆಲುವು ಸಾಧಿಸಿತು.