ಗದಗ : ಪಾಕಿಸ್ತಾನ ಧ್ವಜವನ್ನು ಕಾರಿನ ನಂಬರ್ ಪ್ಲೇಟ್ ಮೇಲೆ ಹಾಕಿ ಪ್ರದರ್ಶನ ಮಾಡಿದ ಹಿನ್ನೆಲೆ ಗದಗ ನಗರ ಠಾಣೆಯಲ್ಲಿ ಸೊಮೋಟೋ ಪ್ರಕರಣವೊಂದು ದಾಖಲಾಗಿದೆ.
ತಹಶೀನ್ ಎಂಬಾತನ ಕಾರ್ ನಂಬರ್ ಪ್ಲೇಟ್ ಮೇಲೆ ಪಾಕ್ ಧ್ವಜ ಪ್ರದರ್ಶಿಸಿ, ಇನ್ಸ್ಟಾಗ್ರಾಮ್ ನಲ್ಲಿ ಹರಿಬಿಡಲಾಗಿದೆ. ತಹಶೀನ್ ಎಂಬಾತನ ಪೋಸ್ಟ್ ಅನ್ನು ಅಬ್ದುಲ್ ಎಂಬಾತನ ಐಡಿಯಿಂದ ಮತ್ತೊಮ್ಮೆ ಶೇರ್ ಮಾಡಲಾಗಿದೆ. ಬಕ್ರೀದ್ ಹಬ್ಬದಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಮಾಜದ ಐಕ್ಯತೆ ಧಕ್ಕೆ, ಸೌಹಾರ್ಧತೆಗೆ ಭಾದಕವಾಗುವ ಕೃತ್ಯವನ್ನು ಎಸಗಿದ್ದಾರೆಂದು ಬಿಎನ್‌ಎಸ್ ಕಾಯ್ದೆ ಕಲಂ 299, 353(2), R/W 3/5 ನಡಿ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.