ಬೆಳಗಾವಿ: ಹಣ್ಣು ಕದಿಯಲು ಬಂದ ಮಕ್ಕಳಿಗೆ ಬುದ್ಧಿವಾದ ಹೇಳಿದ್ದಕ್ಕೆ ಫ್ಯಾಕ್ಟರಿ ಮಾಲೀಕನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಮಹಿಳೆ ಸೇರಿ ಮೂವರು ಆರೋಪಿಗಳು ಜೈಲು ಪಾಲಾಗಿರುವ ಘಟನ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ಅನಗೋಳ ನಿವಾಸಿ ಗುಂಡು ಹನುಮನ್ನವರ್ (58) ಹಲ್ಲೆಗೊಳಗಾದ ವ್ಯಕ್ತಿ. ಮಲಪ್ರಭಾ, ಜಮೀರ್ ತಹಶಿಲ್ದಾರ, ವಿಶಾಲ್ ಎಂಬ ಆರೋಪಿಗಳನ್ನು ಬೆಳಗಾವಿ ಉದ್ಯಮಬಾಗ ಪೊಲೀಸರಿಂದ ಬಂಧಿಸಲಾಗಿದೆ.
ಉದ್ಯಮಬಾಗದ ಪದ್ಮಜಾ ಇಂಜನಿಯರಿಂಗ್ ಪ್ರೋಡಕ್ಟ್ ಫ್ಯಾಕ್ಟರಿ ಆವರಣದಲ್ಲಿ ಫ್ಯಾಕ್ಟರಿ ಮಾಲೀಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಟ್ಟಿಗೆ, ಕಬ್ಬಿಣದ ರಾಡದಿಂದ ಹಲ್ಲೆ ಮಾಡಿದ ಪರಿಣಾಮ ತಲೆ, ಕಣ್ಣಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಗುಂಡು ಹನುಮನ್ನವರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವ್ಯದ್ಯರು ತಿಳಿಸಿದ್ದಾರೆ. ಈ ಘಟನಾ ಸಂಬಂಧ ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೀದರ್ | ಬೆಳ್ಳಂಬೆಳಿಗ್ಗೆ ಅನುಮಾನಾಸ್ಪದ ವಸ್ತು ಸ್ಪೋಟ ; ಆರು ಮಕ್ಕಳಿಗೆ ಗಂಭೀರ ಗಾಯ



















