ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು(ಶನಿವಾರ) ಲಕ್ಷಾಂತರ ಗಣೇಶ ಮೂರ್ತಿಗಳ ವಿಸರ್ಜನೆಯಾಗಿದೆ.
ಸಂಚಾರಿ ಮತ್ತು ಮೊಬೈಲ್ ಟ್ಯಾಂಕರ್ ಹಾಗೂ ಕೆರೆ ಅಂಗಳದ ಶಾಶ್ವತ ಹಾಗೂ ತಾತ್ಕಾಲಿಕ ಕಲ್ಯಾಣಿಗಳಲ್ಲಿ ಒಟ್ಟು 1.14 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದೆ.
ಪೂರ್ವ ವಲಯ: 36,725
ಪಶ್ಚಿಮ ವಲಯ: 12,874
ದಕ್ಷಿಣ ವಲಯ: 52,181
ಬೊಮ್ಮನಹಳ್ಳಿ ವಲಯ: 1,330
ದಾಸರಹಳ್ಳಿ ವಲಯ: 503
ಮಹದೇವಪುರ ವಲಯ: 3,299
ಆರ್.ಆರ್.ನಗರ ವಲಯ: 4,105
ಯಲಹಂಕ ವಲಯ: 3,385
ಒಟ್ಟು: 1,14,402 ಗಣೇಶ ಮೂರ್ತಿಗಳು ವಿಸರ್ಜನೆ ಆಗಿವೆ.



















