ಹುಬ್ಬಳ್ಳಿ: ವಕ್ಫ್ ಗಾಗಿ ನಮ್ಮದು ಪ್ರತ್ಯೇಕ ಹೋರಾಟ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇದಕ್ಕಾಗಿ ಎಷ್ಟು ತಂಡಗಳು ಆಗಲಿ. ನಮಗೆ ಯಾವ ತೊಂದರೆ ಇಲ್ಲ. ನಾವು ಮಾತ್ರ ಪಾದಯಾತ್ರೆ ನಡೆಸುತ್ತೇವೆ. ವಕ್ಫ್ ವಿಚಾರದಲ್ಲಿ ಬಿಜೆಪಿ ಕವಲು ಹಾದಿ ಹಿಡಿದಿದೆ ಎಂಬ ಕುರಿತು ಹೇಳುವುದಾದರೆ ನಮ್ಮದು ಒರಿಜಿನಲ್ ಹಾದಿ. ನಮ್ಮದು ಕವಲು ಹಾದಿ ಅಲ್ಲ, ನಮ್ಮದು ಒರಿಜಿನಲ್ ದಾರಿ. ಕೆಲವರದು ಸೈಡ್ ರೋಡ್. ರಾಜ್ಯಾಧ್ಯಕ್ಷರೇ ಎಲ್ಲಿಗೂ ಹೋಗಿಲ್ಲ. ಆದರೆ, ನಾವು ಹೊರಟಿದ್ದೇವೆ ಎಂದಿದ್ದಾರೆ.
ಯತ್ನಾಳ್ ಪಾದಯಾತ್ರೆ ನಿಲ್ಲಿಸದಿದ್ದರೆ, ನಾವು ಪ್ರತ್ಯೇಕ ಪಾದಯಾತ್ರೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿರುವ ರೇಣುಕಾಚಾರ್ಯ ವಿಷಯವಾಗಿ ಮಾತನಾಡಿದ ಅವರು, ರೇಣುಕಾಚಾರ್ಯ ಯಾರು ಎಂಬುವುದೇ ಗೊತ್ತಿಲ್ಲ. ಥರ್ಡ್ ಡಿಗ್ರಿ ರಾಜಕಾರಣಿಗಳ ಕುರಿತು ನನಗೆ ಕೇಳಬೇಡಿ ಎಂದು ಕಿಡಿಕಾರಿದ್ದಾರೆ.
ಚಿಂತಾಮಣಿಯಲ್ಲಿ ಪೊಲೀಸರು ಗೂಂಡಾಗಿರಿ ಮಾಡಿದ್ದಾರೆ. ಜಮೀರ್ ಅಹಮ್ಮದ್, ಸಿದ್ದರಾಮಯ್ಯನವರು ಮುಸ್ಲಿಮರ ಪರ ನಿಂತರೆ ಮುಂದೆ ಇವರನ್ನು ರಸ್ತೆ ಮೇಲೆ ಓಡಾಡೋಕೆ ಬಿಡಲ್ಲ. ಹೀಗಾಗಿ, ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡಬೇಕು ಎಂದು ಹೇಳಿದ್ದಾರೆ.