ದಾವಣಗೆರೆ : ಕಾಂಗ್ರೆಸ್ ಪಕ್ಷದ ನೀತಿ ಎಂದರೆ ಯಾವುದೇ ಶಾಸಕರು ಮೃತರಾಗುತ್ತಾರೋ ಅವರ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ. ಅದೇ ರೀತಿ ಬಾಗಲಕೋಟೆಯಲ್ಲಿಯೂ ಕೂಡ ಮೇಟಿಯವರ ಚಿಕ್ಕ ಮಗನಿಗೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಾಚುನಾವಣೆ ಹಿನ್ನೆಲೆಯಲ್ಲಿ ಇಂದು ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಸಿಎಂ-ಡಿಸಿಎಂ ಸೇರಿದಂತೆ ಹಲವು ಗಣ್ಯರು ಸಮರ್ಥ ಶಾಮನೂರುಗೆ ಸಾಥ್ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾವು ಅ ಜಾತಿ ಈ ಜಾತಿ ಅಂತ ನೋಡಿಲ್ಲ, ಎಲ್ಲಾರನ್ನು ಒಳಗೊಂಡಿರುವ ಪಕ್ಷ ಎಂದರೆ ಕಾಂಗ್ರೆಸ್ ಪಕ್ಷ ಎಂದಿದ್ದಾರೆ. ಇನ್ನು, ನುಡಿದಂತೆ ನಡೆಯುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಗಐದು ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ, ಮೊದಲನೇ ಸ್ಥಾನ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಜನರ ವಿಶ್ವಾಸವನ್ನು ಗಳಿಸಿಕೊಂಡಿರುವ ಕಾಂಗ್ರೆಸ್ ಪಕ್ಷ, ಕಳೆದ ಮೂರು ಬೈ ಎಲೆಕ್ಷನ್‌ನಲ್ಲಿಯೂ ಕೂಡ ಬಹು ಅಂತರದಲ್ಲಿ ಗೆದ್ದಿದ್ದೇವೆ ಜನರು ನಮ್ಮ ಮೇಲೆ ವಿಶ್ವಾಸವನ್ನು ಹೊಂದಿದ್ದಾರೆ. ಈ ಚುನಾವಣೆ ಕೂಡ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ, ಈಗ ಬಾಗಲಕೋಟೆ ಗೆ ಹೋಗುತ್ತೇವೆ. 1 ಅಥವಾ 2 ರಂದು ನಾನು ಮತ್ತೆ ಚುನಾವಣೆ ಪ್ರಚಾರಕ್ಕೆ ದಾವಣಗೆರೆಗೆ ಬರುತ್ತೇನೆ. ನಾನು ಕುಟುಂಬ ರಾಜಕಾರಣವನ್ನು ಬೆಂಬಲಿಸೋದಿಲ್ಲ. ಯಾವ ಅಭ್ಯರ್ಥಿ ಗೆಲ್ಲುತ್ತಾರೋ ಅವರನ್ನು ನಿಲ್ಲಿಸುತ್ತೇವೆ. ಜಮೀರ್ ಕೂಡ ಬರ್ತಾರೆ, ಬಂಡಾಯ ಶಮನ ಮಾಡುತ್ತೇವೆ, ಎಲ್ಲವು ಸರಿ ಹೋಗಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯದ ಜನತೆಗೆ ಗುಡ್ ನ್ಯೂಸ್ – ಕೇಂದ್ರದಿಂದ ಪ್ರತಿನಿತ್ಯ 10 ಸಾವಿರ ಸಿಲಿಂಡರ್ ಪೂರೈಕೆ!



















