ಬೆಂಗಳೂರು : ಯೆಲ್ಲೋ ಲೈನ್‌ನಲ್ಲಿ ಸಂಚರಿಸುತ್ತಿದ್ದ ಡ್ರೈವರ್ಲೆಸ್ ನಮ್ಮ ಮೆಟ್ರೋ ರೈಲು ಹಳಿ ತಪ್ಪಿದ ಘಟನೆ ಜನವರಿ 15ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಡಿಪೋದಲ್ಲಿ ಈ ಅವಘಡ ಸಂಭವಿಸಿದ್ದು, ಡಿಪೋದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದತ್ತ ಸಾಗುತ್ತಿದ್ದ ವೇಳೆ ಮೂರನೇ ಡ್ರೈವರ್ಲೆಸ್ ರೈಲು ಹಳಿ ತಪ್ಪಿರುವುದು ತಿಳಿದುಬಂದಿದೆ.
ಘಟನೆ ಎಲಿವೇಟೆಡ್ ಕಾರಿಡಾರ್ ಮೇಲೆ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಆರು ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿ ತನಿಖೆ ಆರಂಭಿಸಿದೆ.
ಆರ್.ವಿ. ರೋಡ್–ಬೊಮ್ಮಸಂದ್ರವರೆಗೆ 19.15 ಕಿಮೀ ಉದ್ದದ ಯೆಲ್ಲೋ ಲೈನ್‌ನಲ್ಲಿ ಸದ್ಯ 8 ರೈಲುಗಳಿದ್ದು, 7 ರೈಲುಗಳು ಕಾರ್ಯಾಚರಣೆಯಲ್ಲಿವೆ. 8ನೇ ರೈಲಿನ ಪರೀಕ್ಷಾ ಓಡಾಟ ನಡೆಯುತ್ತಿದ್ದು, ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10ರಂದು ನರೇಂದ್ರ ಮೋದಿ ಚಾಲನೆ ನೀಡಿದ್ದು, ಆಗಸ್ಟ್ 11ರಿಂದ ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಸುರಕ್ಷತೆ ಕುರಿತು ಇದೀಗ ಪ್ರಶ್ನೆಗಳು ಉದ್ಭವಿಸಿವೆ.
ಇದನ್ನೂ ಓದಿ : ಶಂಕಿತ ಉಗ್ರ ಜುನೈದ್ ಅಹ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ಬಹುಮಾನ | NIA ಘೋಷಣೆ



















