ಸುರ್ಜೇವಾಲಾ ಅವರನ್ನ ಭೇಟಿಯಾಗಿ ಅರಣ್ಯ ಇಲಾಖೆಯ ಸಾಧನೆ ಬಗ್ಗೆ ಚರ್ಚಿಸಿದ್ದೇನೆ. ಪರಿಸರ ಇದ್ದರೆ ನಾವೆಲ್ಲರೂ ಇರುತ್ತೇವೆ. ಉಸ್ತುವಾರಿಗಳಿಗೆ ಅರಣ್ಯ ಇಲಾಖೆ ಪರಿವರ್ತನೆ ಬಗ್ಗೆ ತಿಳಿಸಿದ್ದೇನೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಕಾಂಕ್ರೀಟ್ ಕಾಡಾಗಿ ಬೆಳೆಯುತ್ತಿದೆ. ಆದರೇ ಅರಣ್ಯೀಕರಣಕ್ಕೆ ನಾವು ಗಮನ ಕೊಟ್ಟಿದ್ದೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ವರದಿಗಾರರಿಗೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ೧೦ ಸಾವಿರ ಎಕರೆ ಅರಣ್ಯ ವಶಪಡಿಸಿಕೊಂಡಿದ್ದೇವೆ. ಹೆಚ್.ಎಂಟಿ ಗೆ ನೀಡಿದ್ದ ಭೂಮಿ ಮೋಸವಾಗಿದೆ. ಹೆಚ್ ಎಂಟಿಯವರು ರಿಯಲ್ ಎಸ್ಟೇಟ್ ಗೆ ಕೊಟ್ಟಿದ್ದರು. ಈ ಸಂಬಂಧಿಸಿದ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿದೆ. ಆ ಭೂಮಿ ಹಾರ್ಟ್ ಆಫ್ ದಿ ಸಿಟಿಯಲ್ಲಿದೆ. ಅಲ್ಲಿ ಬಯೋ ಪಾರ್ಕ್ ಮಾಡಬೇಕಿದೆ. ಅದನ್ನು ಮರುವಶಕ್ಕೆ ಪಡೆಯುವ ಪ್ರಯತ್ನ ನಡೆದಿದೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ನೇತೃತ್ವದಲ್ಲಿ ಹೆಚ್.ಎಂಟಿ ರಿಯಲ್ ಎಸ್ಟೇಟ್ ಮಾಡಲು ಹೊರಟಿದೆ. ಜುಲೈ ೨೯ ರಂದು ಪ್ರಕರಣ ವಿಚಾರಣೆಗೆ ಬರುತ್ತಿದೆ. ಬೆಂಗಳೂರನ್ನು ಕಾಂಕ್ರೀಟ್ ಕಾಡು ಮಾಡಿದ್ದೀರಿ. ಇನ್ನೊಂದೆಡೆ ಲಂಗ್ ಸ್ಪೇಸ್ ಮಾಡುವುದಕ್ಕೆ ಅಡ್ಡಗಾಲು ಹಾಕುತ್ತಿದ್ದೀರಿ. ಇದಕ್ಕೆ ನೀವೆ ಉತ್ತರಿಸಬೇಕು ಎಂದು ಖಂಡ್ರೆ ಒತ್ತಾಯಿಸಿದ್ದಾರೆ.


















