ಚಿಕ್ಕಬಳ್ಳಾಪುರ: ವಕ್ಫ್ ವಿರುದ್ಧ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ವಕ್ಫ್ ಕಿತ್ತು ಹಾಕುವವರೆಗೂ ನಮ್ಮ ಹೋರಾಟ ನಡೆಯಲಿದೆ. ವಕ್ಫ್ ದೊಡ್ಡ ತಿಮಿಂಗಿಲ, ಅದು ಎಲ್ಲವನ್ನೂ ಕಬಳಿಸುತ್ತಿದೆ. ಅಧಿವೇಶನದಲ್ಲಿ ವಕ್ಫ್ ಮೊದಲ ಪ್ರಸ್ತಾಪದ ವಿಚಾರ. ವಕ್ಫ್ ದೇಶದ ಹಲವು ಭಾಗಗಳನ್ನು ವಶಪಡಿಸಿಕೊಂಡು ತನ್ನ ಆಸ್ತಿಯನ್ನಾಗಿಸಿಕೊಳ್ಳಲು ಮುಂದಾಗಿದೆ. ಇದು ಹಿಂದೆ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಮಾಡಿದ ಕೆಲಸ. ಅವರು ಅಧಿಕಾರದಿಂದ ಇಳಿದು ಹೋಗುವಾಗ ಈ ಯಡವಟ್ಟು ಮಾಡಿದ್ದಾರೆ. ಅದನ್ನು ಪ್ರಧಾನಿ ಸರಿಪಡಿಸಲಿದ್ದಾರೆ. ಇದಕ್ಕೆ ಜನರ ಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಗೆ ಮೊದಲಿನಿಂದಲೂ ಮುಸ್ಲಿಂ ಸಮುದಾಯವನ್ನು ಓಲೈಸುವುದೇ ದೊಡ್ಡ ಕೆಲಸವಾಗಿದೆ. ರಾಜ್ಯದಲ್ಲಿ ಸಚಿವ ಜಮೀರ್ ಅಹಮದ್ ಒತ್ತಡ ಹೇರಿ ವಕ್ಫ್ ಹೆಸರಿಗೆ ದಾಖಲೆ ಮಾಡಿಸಿಕೊಡುತ್ತಿದ್ದಾರೆ. ಗ್ಯಾರಂಟಿ ಭಾಗ್ಯಗಳ ಹೊರೆಯಿಂದ ಸರ್ಕಾರ ಕನ್ನ ಹಾಕುತ್ತಿದೆ ಎಂದು ಗುಡುಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಅಧಿವೇಶನದಲ್ಲಿ ವಕ್ಫ್ ಸೇರಿದಂತೆ ಕೆಲ ಧಾರ್ಮಿಕ ಮಂಡಳಿಗಳ ತಿದ್ದುಪಡಿ ಮಾಡಲಿದ್ದಾರೆ. ‘ವಕ್ಫ್ ಬೋರ್ಡ್ ಮಂಡಳಿ ಹೋಗುತ್ತದೆ. ಈ ಮೂಲಕ ಪ್ರಧಾನಿ ಅವರು ವಕ್ಫ್ ಎಂಬ ರಾಕ್ಷಸನ ಸಂಹಾರ ಮಾಡಲಿದ್ದಾರೆ ಎಂದಿದ್ದಾರೆ.