ಬೆಳಗಾವಿ : ನಮ್ಮ ಕುಟುಂಬ ಯಾವತ್ತೂ ಅಧಿಕಾರದ ಹಿಂದೆ ಹೋದವರಲ್ಲ. ಜನರಿಂದಲೇ ನಾವಿಂದು ಶಾಸನ ಸಭೆಗಳಲ್ಲಿ ಅಧಿಕಾರದಲ್ಲಿದ್ದೇವೆ.
ಮತದಾರರ ಆಶೀರ್ವಾದ ಇರುವವರೆಗೆ ನಾವು ನಿಮ್ಮ ಸೇವೆಯಲ್ಲಿರುತ್ತೇವೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲೆಯ ಯಾದವಾಡ ಗ್ರಾಮದ ಘಟ್ಟಗಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿಲ್ಲ. ಇದು ಜನರು ನೀಡಿರುವ ಅಧಿಕಾರ. ಪ್ರೀತಿಯಿಂದ ಗೆಲ್ಲಿಸಿ ಕಳುಹಿಸಿದ ಮತದಾರರಿಗೆ ನಾವು ಸದಾ ಚಿರಋುಣಿಯಾಗಿರುತ್ತೇವೆ ಎಂದಿದ್ದಾರೆ.