ಮೈಸೂರು : ನಾಗಾರಹೊಳೆ ನ್ಯಾಶನಲ್ ಪಾರ್ಕ್ ಮತ್ತು ಬಂಡೀಪುರ ನ್ಯಾಶನಲ್ ಪಾರ್ಕ್‌ನಲ್ಲಿ ಸಫಾರಿ ಪುನಾರಂಭಿಸುವ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ಮೈಸೂರಿನಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ನಗರದ ಕಲಾಮಂದಿರ ಸಮೀಪದ ಆರ್.ಸಿ ಕಚೇರಿ ಎದುರು ರೈತ ಮುಖಂಡ ಹಳ್ಳಿಕೇರಿ ಭಾಗ್ಯರಾಜು ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಆರ್.ಸಿ ಕಚೇರಿಗೆ ಪ್ರವೇಶಿಸಲು ಯತ್ನಿಸಿದ ರೈತರನ್ನು ಪೊಲೀಸರು ತಡೆದಿದ್ದಾರೆ.
ಸಫಾರಿ ಬಂದ್ ಮಾಡಬೇಕು, ರೈತರ ಹಿತ ಕಾಪಾಡಬೇಕು ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಸಫಾರಿ ಬಂದ್ ಮಾಡಿದ ಬಳಿಕ ಹುಲಿ ಹಾಗೂ ಕಾಡಾನೆ ದಾಳಿ ಪ್ರಕರಣಗಳು ಕಡಿಮೆಯಾಗಿವೆ ಎಂದು ವಾದಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸಫಾರಿ ಪುನಾರಂಭ ನಿರ್ಧಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ತಕ್ಷಣವೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಸಂಬಂಧವಾಗಿ ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಇದನ್ನೂ ಓದಿ : ಗಂಭೀರ್ ನಿರ್ಧಾರಗಳಿಗೆ ಸಂಜಯ್ ಮಂಜ್ರೇಕರ್ ಗೇಲಿ | ‘ವಾಷಿಂಗ್ಟನ್ ಸುಂದರ್ ಒಬ್ಬರೇ ಎಲ್ಲ ಮರ್ಜಿಗೂ ಮದ್ದಲ್ಲ’!



















