ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೇವಲ ಮತ ಬ್ಯಾಂಕ್ ಮಾಡುವ ಉದ್ಧೇಶದಿಂದ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರದ ವಿರುದ್ಧ ಜನಾಕ್ರೋಶ ಎದ್ದಿದೆ. ನಾವು ಕೂಡ ಸುಮ್ಮನೆ ಇರುವುದಿಲ್ಲ. ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ಮುಗಿದ ಜನಾಕ್ರೋಶ ಯಾತ್ರೆ ಮುಗಿದಿದೆ. ಮೂರನೇ ಹಂತದಲ್ಲಿ ಏ. 25 ರಂದು ಚಿತ್ರದುರ್ಗಕ್ಕೆ ಯಾತ್ರೆ ಬರಲಿದೆ. ರಾಜ್ಯದಲ್ಲಿ ಕಾನೂನು ಸರಿಯಿಲ್ಲ ಅಂದ್ರೆ ಏನೂ ನಡೆಯುತ್ತಿಲ್ಲ ಅಂತ ಅರ್ಥ ಎಂದಿದ್ದಾರೆ.
ಹಲವರು ಶಾಸಕರು, ಸಚಿವರ ಹೆಸರು ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಸಚಿವ ನಾಗೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಚಾವ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಕಾರಣವಾದವರನ್ನು ಅರಸ್ಟ್ ಮಾಡಿಲ್ಲ. ಜಾತಿ ಜನಗಣತಿ ಜಾತಿ, ಜಾತಿಗಳನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಕಾಂತರಾಜ್ ಆಯೋಗದ ಮೂಲ ವರದಿ ಕಳ್ಳತನ ಆಗಿದೆ ಅಂತಾರೆ. ಆದರೆ, ಆ ವರದಿ ಎಲ್ಲಿಗೆ ಹೋಯಿತು? ಈ ವರದಿ ಕಳ್ಳತನವಾಗಿದ್ದು, ಸಿದ್ಧರಾಮಯ್ಯ ಆಪ್ತರ ಅವಧಿಯಲ್ಲಿ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆರೋಪಿಸಿದ್ದಾರೆ.