ರಾಯಚೂರು: ದೇಶದಲ್ಲಿ ಒಬ್ಬರೇ ಸ್ಟಾರ್ ಪ್ರಚಾರಕರಿದ್ದಾರೆ, ಅವರೇ ಮೋದಿ (Narendra Modi) ಸಾಹೇಬ್ರು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್(Santosh Lad) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ನಡೆದ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ (progress review meeting) ನಂತರ ಮಾತನಾಡಿದ ಅವರು, ಅವರೇ ಉತ್ತಮವಾಗಿ ಪ್ರಚಾರ ಮಾಡುತ್ತಿರುವುದರಿಂದಾಗಿ ಎಲ್ಲ ಪಾರ್ಟಿಗಳ ಪ್ರಚಾರವನ್ನೂ ಅವರಿಗೆ ವಹಿಸುತ್ತೇವೆ ಎಂದು ಹೇಳಿದ್ದಾರೆ.
ಅವರಿಗೆ ಫುಲ್ ಟೈಂ ಇದೆ. ಹೀಗಾಗಿ ಇಡೀ ದೇಶಾದ್ಯಂತ ಸಂಚಾರ ಮಾಡಿ ಅವರು ಪ್ರಚಾರ ಮಾಡುತ್ತಾರೆ. ಅವರಿಗೆ ಓಡಾಡೋಕೆ, ಪ್ರಚಾರಕ್ಕೆ ಸಮಯವಿದೆ. ಆದರೆ, ಸಿಎಂ ಸಿದ್ದರಾಮಯ್ಯ(CM Siddaramaiah) ಅವರಿಗೆ ಬೇರೆ ರಾಜ್ಯಕ್ಕೆ ಹೋಗಲೂ ಸಮಯ ಇಲ್ಲವಾಗಿದೆ. ಪ್ರಧಾನಿ ಮೋದಿ ಒಂದೊಂದು ರಾಜ್ಯಕ್ಕೆ ಮೂವತ್ತು, ನಲವತ್ತು, ಐವತ್ತು ಸಾರಿ ಹೋಗುತ್ತಾರೆ. ಹೀಗಾಗಿ ದೇಶದಲ್ಲಿ ಅವರೋಬ್ಬರೇ ಪ್ರಚಾರಕರು ಎಂದು ಹೇಳಿದ್ದಾರೆ.